Publish Date: Sun, 07 Mar 2021 (09:45 IST)
Updated Date: Sun, 07 Mar 2021 (09:47 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಮಾರ್ಚ್ 20 ರಂದು ಶನಿವಾರ ಸಾಂಸ್ಕೃತಿ ರಾಜಧಾನಿ ಮೈಸೂರಿನಲ್ಲಿ ಯುವರತ್ನ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ. ಇತ್ತೀಚೆಗಷ್ಟೇ ಚಿತ್ರತಂಡ ಶಿರಡಿ ಮತ್ತು ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ಚಿತ್ರದ ಬಿಡುಗಡೆ ಸರಾಗವಾಗಿ ನಡೆಯಲಿ ಎಂದು ಪ್ರಾರ್ಥನೆ ನಡೆಸಿತ್ತು.
ಏಪ್ರಿಲ್ 1 ರಿಂದ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ ಇದಕ್ಕೂ ಮೊದಲು ಜನರನ್ನು ಸೆಳೆಯಲು ಪ್ರಿ ರಿಲೀಸ್ ಈವೆಂಟ್ ಆಯೋಜಿಸಲಿದೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್, ಧ್ರುವ ಸರ್ಜಾರ ಪೊಗರು ಸಿನಿಮಾ ತಂಡಗಳು ಪ್ರಿ ರಿಲೀಸ್ ಈವೆಂಟ್ ಆಯೋಜಿಸಿ ಬೃಹತ್ ಜನರನ್ನು ಸೆಳೆಯಲು ಯಶಸ್ವಿಯಾಗಿತ್ತು. ಇದೀಗ ಯುವರತ್ನ ಸರದಿ.