Publish Date: Sun, 07 Mar 2021 (09:33 IST)
Updated Date: Sun, 07 Mar 2021 (09:35 IST)
ಬೆಂಗಳೂರು: ರಾಬರ್ಟ್ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಮಾರ್ಚ್ 11 ರಿಂದ ತೆರೆಗೆ ಬರಲಿರುವ ರಾಬರ್ಟ್ ಬಿಡುಗಡೆಗೆ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಈಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೃಹತ್ ಕಟೌಟ್ ಗಳು ಥಿಯೇಟರ್ ಮುಂದೆ ರಾರಾಜಿಸುತ್ತಿವೆ. ಎಂಜಿ ರಸ್ತೆಯಲ್ಲಿರುವ ಶಂಕರ್ ನಾಗ್ ಥಿಯೇಟರ್ ಮುಂದೆ ದರ್ಶನ್ ರ ಬೃಹತ್ ಕಟೌಟ್ ತಲೆಎತ್ತಿದ್ದು, ಈ ಕಟೌಟ್ ಗೆ ಅಭಿಮಾನಿಗಳು ಹಾರ, ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದಿದ್ದಾರೆ.
ಇನ್ನು ಕೆಲವು ಕಡೆ ಅಭಿಮಾನಿಗಳು ರಾಬರ್ಟ್ ಪೋಸ್ಟರ್ ಗೆ ಆರತಿ ಮಾಡಿ ಪೂಜೆ ಮಾಡುವ ಮೂಲಕ ಚಿತ್ರ ಶತದಿನೋತ್ಸವ ಕಾಣಲೆಂದು ಹಾರೈಸಿದ್ದಾರೆ. ಬಿಡುಗಡೆಗೆ ಮೊದಲೇ ಇಷ್ಟು ಕ್ರೇಜ್ ಇರಬೇಕಾದರೆ ಈ ಸಿನಿಮಾ ಹಿಟ್ ಆಗದೇ ಇರುತ್ತದೆಯೇ?