ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ನಟಿ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ನಿರಾಸೆಯಾಗುವ ಸುದ್ದಿಯೊಂದನ್ನು ರಾಧಿಕಾ ನೀಡಿದ್ದಾರೆ.
ಕೊರೋನಾ ಕಾರಣದಿಂದ ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಸುರಕ್ಷತೆ ದೃಷ್ಟಿಯಿಂದ ಯಾರೂ ಮನೆ ಹತ್ತಿರ ಬಂದು ವಿಶ್ ಮಾಡುವ ಪ್ರಯತ್ನ ಮಾಡಬೇಡಿ. ನಿಮ್ಮೆಲ್ಲರ ಸಂದೇಶಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಕಳುಹಿಸಿ, ಸಾಧ‍್ಯವಾದಷ್ಟು ಓದಿ ಪ್ರತಿಕ್ರಿಯಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ ಎಂದು ರಾಧಿಕಾ ಸಂದೇಶ ಬರೆದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಕೂಡಾ ಕೊರೋನಾ ಕಾರಣದಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ರಾಧಿಕಾಗೆ ಇಂದಿಗೂ ಅಭಿಮಾನಿಗಳ ಬಳಗವೇ ಇದೆ. ಅವರಿಗೆಲ್ಲಾ ಈ ವರ್ಷ ನಿರಾಸೆ ಕಾದಿದೆ.