Select Your Language

Notifications

webdunia
webdunia
webdunia
webdunia

ಡ್ಯಾನ್ಸ್ ರಿಯಾಲಿಟಿ ಶೋಗೆ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್

ಡ್ಯಾನ್ಸ್ ರಿಯಾಲಿಟಿ ಶೋಗೆ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್
ಬೆಂಗಳೂರು , ಶುಕ್ರವಾರ, 5 ಮಾರ್ಚ್ 2021 (09:21 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ಎಲ್ಲರಿಗೂ ನೆನಪಿಗೆ ಬರುವುದು ಡ್ಯಾನ್ಸ್. ಸ್ಯಾಂಡಲ್ ವುಡ್ ನಲ್ಲಿ ಈಗಿನ ಹೀರೋಗಳ ಪೈಕಿ ಅದ್ಭುತವಾಗಿ ಡ್ಯಾನ್ಸ್ ಮಾಡುವವರ ಸಾಲಿನಲ್ಲಿ ಮುಂಚೂಣಿಗನಾಗಿರುವ ಪುನೀತ್ ಈಗ ಡ್ಯಾನ್ಸ್ ಶೋಗೆ ಬರಲಿದ್ದಾರೆ.


ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ ಪುನೀತ್ ಅತಿಥಿಯಾಗಿ ಬಂದಿದ್ದಾರೆ. ಈ ಎಪಿಸೋಡ್ ಈ ವಾರ ಪ್ರಸಾರವಾಗಲಿದೆ. ಪುನೀತ್ ಜೊತೆಗೆ ಈ ವಾರದ ಎಪಿಸೋಡ್ ಶೂಟಿಂಗ್ ನಡೆದಿದೆ.

ಈ ರಿಯಾಲಿಟಿ ಶೋನಲ್ಲಿ ರಾಘವೇಂದ್ರ ರಾಜಕುಮಾರ್, ಚಿನ್ನಿ ಪ್ರಕಾಶ್, ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯಾ ತೀರ್ಪುಗಾರರಾಗಿದ್ದಾರೆ. ಅವರ ಜೊತೆಗೆ ಈ ವಾರ ಅಪ್ಪು ಕೂಡಾ ಸ್ಪರ್ಧಿಗಳ ರೋಮಾಂಚಕಾರಿ ನೃತ್ಯ ವೀಕ್ಷಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ಸಿನಿಮಾಗೆ ಯು/ಎ ಪ್ರಮಾಣ ಕೊಟ್ಟ ಸೆನ್ಸಾರ್ ಮಂಡಳಿ