ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಹಾಡುಗಳು ಈಗಾಗಲೇ ಕೆಲವೊಂದು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ. ಈಗ ಮತ್ತೊಂದು ಹಾಡು ಬಿಡುಗಡೆಯಾಗಲಿದೆ.
ಮಾರ್ಚ್ 12 ರಂದು ಯುವರತ್ನ ಸಿನಿಮಾದ ‘ಫೀಲ್ ದ ಪವರ್’ ಎಂಬ ಪವರ್ ಫುಲ್ ಹಾಡು ಬಿಡುಗಡೆಯಾಗುತ್ತಿದೆ. ಬೆಳಿಗ್ಗೆ 10.12 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ತಮನ್ ಎಸ್ ಸಂಗೀತ ಸಂಯೋಜನೆಯ ಯುವರತ್ನ ಸಿನಿಮಾ ಪವರ್ ಆಫ್ ಯೂಥ್, ಊರಿಗೊಬ್ಬ ರಾಜ, ನಿನ್ನಿಂದಲೇ ಹಾಗೂ ಮೊನ್ನೆಯಷ್ಟೇ ಬಿಡುಗಡೆಯಾದ ಪಾಠಶಾಲ ಹಾಡು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಏಪ್ರಿಲ್ 1 ರಿಂದ ಸಿನಿಮಾ ತೆರೆಗೆ ಬರಲಿದೆ.