Daily Horoscope

Select Your Language

Notifications

webdunia
webdunia
webdunia
webdunia

ರಾಬರ್ಟ್ ಸಿನಿಮಾ ಪೈರಸಿ ಮಾಡಲು ಹೋದ್ರೆ ಹುಷಾರ್!

ರಾಬರ್ಟ್
ಬೆಂಗಳೂರು: ರಿಷಬ್ ಶೆಟ್ಟಿ ‘ಹೀರೋ’ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಪೈರಸೆಯಾಗಿತ್ತು. ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಮತ್ತೊಂದು ಬಹುನಿರೀಕ್ಷೆಯ ಚಿತ್ರ ‘ರಾಬರ್ಟ್’.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಸಿನಿಮಾ ಬಗ್ಗೆ ಭಾರೀ ಕುತೂಹಲವಿದೆ. ಈ ಸಿನಿಮಾವನ್ನೇನಾದರೂ ಆನ್ ಲೈನ್ ನಲ್ಲಿ ಸೋರಿಕೆ ಮಾಡುವುದು, ಪೈರಸಿ ಮಾಡಲು ಹೋದರೆ ಹುಷಾರ್ ಎಂದು ನಿರ್ಮಾಪಕ ಉಮಾಪತಿಗೌಡ ಎಚ್ಚರಿಕೆ ನೀಡಿದ್ದಾರೆ.

ರಾಬರ್ಟ್ ಸಿನಿಮಾ ಪೈರಸಿ ಮಾಡಲು ಹೋದರೆ ತಕ್ಕ ಪಾಠ ಕಲಿಸುತ್ತೇವೆ. ನಾನು ಈಗಲೇ ಹೇಳ್ತಿದ್ದೇನೆ. ನಾನು ಬಂಡೆ ಥರಾ ನಿಂತಿದ್ದೇನೆ. ಆಮೇಲೆ ಅದರ ಇಫೆಕ್ಟ್ ಏನಾಗುತ್ತದೆಂದು ಹೇಳಲಾಗದು. ನನ್ನನ್ನು ಕೆಟ್ಟವನು ಎನ್ನಬೇಡಿ. ಪೈರಸಿ ಮಾಡಿದವರು ಯಾರೇ ಆದರೂ ಅವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಜೀವಮಾನವಿಡೀ ಆದರೂ ಸರಿಯೇ ಕೋರ್ಟ್ ಕಟಕಟೆಗೆ ಅಲೆಯಲು ಸಿದ್ಧವಾಗಿದ್ದೇವೆ’ ಎಂದು ಉಮಾಪತಿ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಆಚಾರ್ಯ’ ಚಿತ್ರದ ದೃಶ್ಯ ಸೋರಿಕೆ; ಪೊಲೀಸರ ಮೆಲೆ ಸಿಟ್ಟಾದ ನಿರ್ಮಾಪಕರು