Select Your Language

Notifications

webdunia
webdunia
webdunia
webdunia

ತನ್ನದೇ ಚಾನೆಲ್ ಆರಂಭಿಸಿದ ನಟಿ ರಾಗಿಣಿ ದ್ವಿವೇದಿ

ತನ್ನದೇ ಚಾನೆಲ್ ಆರಂಭಿಸಿದ ನಟಿ ರಾಗಿಣಿ ದ್ವಿವೇದಿ
ಬೆಂಗಳೂರು , ಮಂಗಳವಾರ, 9 ಮಾರ್ಚ್ 2021 (09:33 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ತನ್ನ ವೃತ್ತಿರಂಗಕ್ಕೆ ಮರಳಿರುವ ನಟಿ ರಾಗಿಣಿ ದ್ವಿವೇದಿ ಈಗ ಹೊಸ ಕೆಲಸಕ್ಕೆ ಕೈಹಾಕಿದ್ದಾರೆ.


ರಾಗಿಣಿ ತಮ್ಮದೇ ಯೂ ಟ್ಯೂಬ್ ಚಾನೆಲ್ ಲಾಂಚ್ ಮಾಡಿದ್ದಾರೆ. ಈ ಚಾನೆಲ್ ನಲ್ಲಿ ತಮ್ಮ ಅಡುಗೆ ವಿಡಿಯೋ, ಟಿಪ್ಸ್ ಇತ್ಯಾದಿಗಳನ್ನು ಜನರ ಮುಂದಿಡಲಿದ್ದಾರೆ.

ಆಗಾಗ ಸಾಮಾಜಿಕ ಜಾಲತಾಣದಲ್ಲಿ ರಾಗಿಣಿ ತಮ್ಮ ಅಡುಗೆ ವಿಡಿಯೋಗಳನ್ನು ಪ್ರಕಟಿಸುತ್ತಿರುತ್ತಾರೆ. ಇದೀಗ ಯೂ ಟ್ಯೂಬ್ ಚಾನೆಲ್ ಗಳ ಮೂಲಕ ಜನರಿಗೆ ತಮ್ಮ ಟ್ಯಾಲೆಂಟ್ ತಲುಪಿಸಲಿದ್ದಾರೆ. ಈ ಚಾನೆಲ್ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಬಹುದು ಎಂದು ಅವರ ಲೆಕ್ಕಾಚಾರವಂತೆ. ಜನರು ನನ್ನ ಈ ಹೊಸ ಪ್ರಯತ್ನವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ ರಾಗಿಣಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೈದರಾಬಾದ್ ನಲ್ಲಿ ಐಶಾರಾಮಿ ಪ್ರದೇಶದಲ್ಲಿ ಮನೆ ಖರೀದಿಸಿದ ನಿರ್ದೇಶಕ ಅನಿಲ್ ರವಿಪುಡಿ