Publish Date: Mon, 08 Mar 2021 (10:24 IST)
Updated Date: Mon, 08 Mar 2021 (10:29 IST)
ಬೆಂಗಳೂರು: ಇಂದು ಮಹಿಳಾ ದಿನಾಚರಣೆ. ಚಿತ್ರರಂಗದಲ್ಲಿ ಸ್ಟಾರ್ ಗಿರಿ ನಡುವೆಯೂ ತಮ್ಮ ಸ್ವಂತಿಕೆ ಉಳಿಸಿಕೊಂಡಿರುವ ನಟಿಮಣಿಯರು ಯಾರೆಲ್ಲಾ ಇದ್ದಾರೆ ಎಂದು ಇಂದಿನ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಒಂದು ಮೆಲುಕು ಹಾಕೋಣ.
ಕನ್ನಡ ಸಿನಿಮಾಗಳಲ್ಲಿ ಇಂದು ಒಂದೊಂದು ಸಿನಿಮಾಗೆ ಹೊಸ ಹೊಸ ನಾಯಕಿಯರ ಆಗಮನವಾಗುತ್ತಿದೆ. ಹಾಗಿದ್ದರೂ ಸ್ಟಾರ್ ಪಟ್ಟ ಉಳಿಸಿಕೊಂಡಿರುವ ಕೆಲವೇ ಕೆಲವು ನಟಿಯರಿದ್ದಾರೆ.
ಪ್ರಿಯಾಂಕ ಉಪೇಂದ್ರ: ಮದುವೆಯಾಗಿದ್ದರೂ ಇಂದಿಗೂ ಪ್ರಿಯಾಂಕ ಉಪೇಂದ್ರ ಒಂದಾದ ಮೇಲೊಂದು ಸದಭಿರುಚಿಯ ಸಿನಿಮಾ ಮಾಡುತ್ತಲೇ ಇದ್ದಾರೆ. ಇಂದಿಗೂ ಹೀರೋಗಳ ಹಂಗಿಲ್ಲದೇ ಏಕಾಂಗಿಯಾಗಿ ಸಿನಿಮಾ ಗೆಲ್ಲಿಸುವ ಸಾಮರ್ಥ್ಯವಿರುವ ನಟಿ ಪ್ರಿಯಾಂಕ ಉಪೇಂದ್ರ.
ರಚಿತಾ ರಾಂ: ಡಿಂಪಲ್ ಕ್ವೀನ್ ರಚಿತಾ ರಾಮ್ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೂ ನಟಿಸಿದ್ದಾರೆ. ತಮ್ಮದೇ ಅಭಿಮಾನಿಗಳ ಬಳಗವನ್ನು ಹೊಂದಿರುವ ರಚಿತಾ 2013 ರಿಂದ ಇಂದಿನವರೆಗೂ ತಮ್ಮ ಸ್ಟಾರ್ ಪಟ್ಟವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಅದಿತಿ ಪ್ರಭುದೇವ: ಇಂದಿನ ಸ್ಯಾಂಡಲ್ ವುಡ್ ನ ಬಹುತೇಕ ಸಿನಿಮಾಗಳಿಗೆ ಇವರೇ ನಾಯಕಿ. ಸ್ಟಾರ್ ನಟರಿಂದ ಹಿಡಿದು ಹೊಸಬರ ಸಿನಿಮಾಗಳಿಗೂ ನಾಯಕಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಹರಿಪ್ರಿಯಾ: ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಹರಿಪ್ರಿಯಾ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಪಕ್ಕಾ ಕನ್ನಡದ ನಟಿಯರ ಲಿಸ್ಟ್ ನಲ್ಲಿ ಹರಿಪ್ರಿಯಾಗೂ ಅಗ್ರ ಸ್ಥಾನ ಸಿಗುತ್ತದೆ.
ರಶ್ಮಿಕಾ ಮಂದಣ್ಣ: ಇತ್ತೀಚೆಗೆ ಬಂದವರಾದರೂ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತೆಲುಗು, ಹಿಂದಿಯಲ್ಲೂ ಬೇಡಿಕೆಯ ನಟಿಯಾಗಿದ್ದಾರೆ. ಸ್ಟಾರ್ ನಟರೂ ಬೇಡಿಕೆಯಿಡುವ ನಟಿ.
ಸ್ಟಾರ್ ನಟರ ಜೊತೆಗೆ ತಮ್ಮದೇ ಛಾಪು ಉಳಿಸಿಕೊಂಡು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವುದು ಸುಲಭದ ಮಾತಲ್ಲ. ಈ ನಟಿಯರು ಸ್ಯಾಂಡಲ್ ವುಡ್ ನ ಇಂದಿನ ಪವರ್ ಫುಲ್ ಮಹಿಳೆಯರು.