Select Your Language

Notifications

webdunia
webdunia
webdunia
Tuesday, 8 April 2025
webdunia

ರೇಣುಕಾಸ್ವಾಮಿಗೆ ಮಗುವಾದ ವಿಚಾರಕ್ಕೆ ದರ್ಶನ್ ಪ್ರತಿಕ್ರಿಯೆ ಹೇಗಿತ್ತು

Renukaswamy-Darshan

Krishnaveni K

ಬಳ್ಳಾರಿ , ಶುಕ್ರವಾರ, 18 ಅಕ್ಟೋಬರ್ 2024 (12:19 IST)
ಬಳ್ಳಾರಿ: ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿರುವ ವಿಚಾರ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತಿಳಿಸಲಾಗಿದ್ದು, ಇದಕ್ಕೆ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರ ಪರಿಣಾಮ ಆತ ಸಾವನ್ನಪ್ಪಿದ್ದ ಎನ್ನುವುದು ದರ್ಶನ್ ಆಂಡ್ ಗ್ಯಾಂಗ್ ಮೇಲಿನ ಆರೋಪ.

ಪ್ರಕರಣದಲ್ಲಿ ನಟ ದರ್ಶನ್ ಎ2 ಆರೋಪಿಯಾಗಿದ್ದರೆ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ಇಬ್ಬರಿಗೂ ಇತ್ತೀಚೆಗೆ ಕೋರ್ಟ್ ಜಾಮೀನು ನಿರಾಕರಿಸಿದೆ. ಮೊನ್ನೆಯಷ್ಟೇ ರೇಣುಕಾಸ್ವಾಮಿ ಪತ್ನಿ ಸಹನಾ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ವಿಚಾರವನ್ನು ಅದೇ ದಿನ ಜೈಲು ಸಿಬ್ಬಂದಿ, ಬ್ಯಾರಕ್ ಹೊರಗೆ ವಾಕಿಂಗ್ ಮಾಡುತ್ತಿದ್ದ ದರ್ಶನ್ ಗೆ ಹೇಳಿದ್ದಾರಂತೆ. ವಿಷಯ ತಿಳಿದ ತಕ್ಷಣ ಓ ಹೌದಾ, ಒಳ್ಳೆಯದಾಗಲಿ ಎಂದಷ್ಟೇ ದರ್ಶನ್ ಹೇಳಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಜೈಲು ಸಿಬ್ಬಂದಿಗಳು ತಕ್ಷಣವೇ ದರ್ಶನ್ ಗೆ ವಿಷಯ ತಿಳಿಸಿದ್ದಾರಂತೆ. ಇದಕ್ಕೆ ದರ್ಶನ್ ಕೂಡಾ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BBK11: ಬಿಗ್ ಬಾಸ್ ನಿಂದ ಕಿತ್ತಾಡಿದ್ದಕ್ಕೆ ಎಲಿಮಿನೇಟ್ ಜಗದೀಶ್, ರಂಜಿತ್ ನೋಡಿ ಕಣ್ಣೀರು ಹಾಕಿದ ಮನೆಮಂದಿ