Select Your Language

Notifications

webdunia
webdunia
webdunia
webdunia

ಹೈದರಾಬಾದ್ ನಲ್ಲಿ ಚಾರ್ಲಿ 777 ಟೀಂ: ತೆಲುಗು ನಟ ರಾಣಾ ದಗ್ಗುಬಟ್ಟಿ ಮನಗೆದ್ದ ಚಾರ್ಲಿ

ಹೈದರಾಬಾದ್ ನಲ್ಲಿ ಚಾರ್ಲಿ 777 ಟೀಂ: ತೆಲುಗು ನಟ ರಾಣಾ ದಗ್ಗುಬಟ್ಟಿ ಮನಗೆದ್ದ ಚಾರ್ಲಿ
ಹೈದರಾಬಾದ್ , ಸೋಮವಾರ, 30 ಮೇ 2022 (10:29 IST)
Photo Courtesy: Twitter
ಹೈದರಾಬಾದ್: ಜೂನ್ 10 ರಂದು ವಿಶ್ವಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಚಾರ್ಲಿ 777 ಸಿನಿಮಾ ತಂಡ ಈಗ ಹೈದರಾಬಾದ್ ನಲ್ಲಿ ಪ್ರಚಾರ ನಡೆಸಿ ಬಂದಿದೆ.

ನಾಯಕ ರಕ್ಷಿತ್ ಶೆಟ್ಟಿ ಜೊತೆಗೆ ಈ ಸಿನಿಮಾದಲ್ಲಿ ನಾಯಿಯೇ ಪ್ರಮುಖ ಪಾತ್ರ ವಹಿಸುತ್ತಿದೆ. ಬೆಂಗಳೂರಿನಲ್ಲಿ ಟ್ರೈಲರ್ ಲಾಂಚ್ ವೇಳೆ ಈ ನಾಯಿಯೂ ಕಾರ್ಯಕ್ರಮ ಬಂದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಇದೀಗ ಚಿತ್ರತಂಡ ತಾನು ಪ್ರಚಾರ ನಡೆಸುವ ಎಲ್ಲಾ ನಗರಗಳಿಗೂ ನಾಯಿಯ ಜೊತೆ ತೆರಳುತ್ತಿದೆ. ಹೋದಲೆಲ್ಲಾ ತನ್ನ ಚಾರ್ಮ್ ನಿಂದ ಎಲ್ಲರ ಗಮನ ಸೆಳೆಯುತ್ತಿರುವ ಚಾರ್ಲಿ ಹೈದರಾಬಾದ್ ನಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಟ ರಾಣಾ ದಗ್ಗುಬಟ್ಟಿಗೂ ಮೋಡಿ ಮಾಡಿದೆ. ವೇದಿಕೆಯಲ್ಲಿ ರಾಣಾ ಪಕ್ಕವೇ ಕೂತಿದ್ದ ಚಾರ್ಲಿ ಅವರ ಜೊತೆ ಆಟವಾಡಿ ಎಲ್ಲರಿಗೂ ಮನರಂಜಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಹೃದಯಂ’ ಹಿಂದಿ ರಿಮೇಕ್ ನಲ್ಲಿ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಹೀರೋ?