Select Your Language

Notifications

webdunia
webdunia
webdunia
webdunia

ಚಾರ್ಲಿಯ ಮತ್ತಷ್ಟು ತುಂಟಾಟ ತೋರಿಸಲು ರೆಡಿಯಾದ್ರು ರಕ್ಷಿತ್ ಶೆಟ್ಟಿ ಆಂಡ್ ಬಳಗ

ಚಾರ್ಲಿಯ ಮತ್ತಷ್ಟು ತುಂಟಾಟ ತೋರಿಸಲು ರೆಡಿಯಾದ್ರು ರಕ್ಷಿತ್ ಶೆಟ್ಟಿ ಆಂಡ್ ಬಳಗ
ಬೆಂಗಳೂರು , ಶುಕ್ರವಾರ, 27 ಮೇ 2022 (16:28 IST)
ಬೆಂಗಳೂರು: ಚಾರ್ಲಿ 777 ಸಿನಿಮಾದ ಟ್ರೈಲರ್ ಬಿಡುಗಡೆಯಾದ ಮೇಲೆ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.

ಟ್ರೈಲರ್ ನಲ್ಲಿ ನಾಯಿ ಚಾರ್ಲಿ ಮತ್ತು ಧರ್ಮ ಪಾತ್ರದಲ್ಲಿರುವ ರಕ್ಷಿತ್ ಅಭಿನಯ ನೋಡಿ ಅನೇಕರು ಈ ಸಿನಿಮಾ ನೋಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಬಹುಭಾಷೆಗಳಲ್ಲಿ ಜೂನ್ 10 ರಂದು ಥಿಯೇಟರ್ ನಲ್ಲಿ ತೆರೆ ಕಾಣಲಿರುವ ಚಾರ್ಲಿ 777 ಸಿನಿಮಾ ತಂಡ ಇದಕ್ಕೂ ಮೊದಲು ಮತ್ತೊಂದು ಹಾಡು ಬಿಡುಗಡೆಗೆ ಮುಂದಾಗಿದೆ.

ಮೇ 30 ರಂದು ಚಾರ್ಲಿಯ ‘ಜರ್ನಿ ಸಾಂಗ್’ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದರ ಜೊತೆಗೆ ಚಾರ್ಲಿ ಜೊತೆಗೆ ತೆರೆ ಹಿಂದಿನ ಕೆಲವು ಕ್ಷಣಗಳನ್ನೂ ಚಿತ್ರತಂಡ ರಿವೀಲ್ ಮಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಮಗನ ಮುಖ ರಿವೀಲ್ ಮಾಡಿದ್ರು ಸಂಜನಾ ಗಲ್ರಾನಿ