Publish Date: Fri, 27 May 2022 (09:30 IST)
Updated Date: Fri, 27 May 2022 (09:36 IST)
ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡಿನ ಸ್ಟೆಪ್ಸ್ ಈಗ ಟ್ರೆಂಡ್ ಆಗಿದೆ.
ಸ್ವತಃ ವಿಕ್ರಾಂತ್ ರೋಣ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗೆ ಕಿಚ್ಚ ಸುದೀಪ್ ಗೆ ಈ ಹಾಡಿನ ಸ್ಟೆಪ್ ನ್ನು ರೀಲ್ಸ್ ಮಾಡುವಂತೆ ಸವಾಲು ಹಾಕಿದ್ದರು.
ಜಾಕ್ವೆಲಿನ್ ಸವಾಲಿಗೆ ಸೈ ಎಂದ ಕಿಚ್ಚ ಸುದೀಪ್ ಇದೀಗ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಅಪ್ ಲೋಡ್ ಮಾಡಿದ್ದಾರೆ. ರಾ ರಾ ರಕ್ಕಮ್ಮ ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಹಾಕಿರುವ ಸುದೀಪ್ ಇದು ನಿಮಗಾಗಿ ಜಾಕ್ ಎಂದು ಜಾಕ್ವೆಲಿನ್ ಗೆ ಡೆಡಿಕೇಟ್ ಮಾಡಿದ್ದಾರೆ. ಇದಕ್ಕೂ ಮೊದಲು ಸುದೀಪ್ ಜಾಕ್ವೆಲಿನ್ ಗೆ ಕನ್ನಡದಲ್ಲಿ ರಾ ರಾ ರಕ್ಕಮ್ಮನಾಗಿ ನಿಮ್ಮೆದುರು ಬರುತ್ತಿದ್ದೇನೆ ಎಂದು ಅಚ್ಚ ಕನ್ನಡದಲ್ಲಿ ಹೇಳಿಸಿದ್ದರು. ಇದಕ್ಕೆ ಪ್ರತಿ ಸವಾಲಾಗಿ ಜಾಕ್ವೆಲಿನ್ ರೀಲ್ಸ್ ಚಾಲೆಂಜ್ ನೀಡಿದ್ದರು. ಅದನ್ನೀಗ ಸುದೀಪ್ ಪೂರೈಸಿದ್ದಾರೆ.
Krishnaveni K
Publish Date: Fri, 27 May 2022 (09:30 IST)
Updated Date: Fri, 27 May 2022 (09:36 IST)