Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ್ ‘ಟ್ವೆಂಟಿ ಒನ್ ಅವರ್’ ಸಿನಿಮಾ ತಂಡಕ್ಕೆ ಕಿಚ್ಚನ ಆತಿಥ್ಯ

ಡಾಲಿ ಧನಂಜಯ್ ‘ಟ್ವೆಂಟಿ ಒನ್ ಅವರ್’ ಸಿನಿಮಾ ತಂಡಕ್ಕೆ ಕಿಚ್ಚನ ಆತಿಥ್ಯ
ಬೆಂಗಳೂರು , ಬುಧವಾರ, 18 ಮೇ 2022 (17:07 IST)
ಬೆಂಗಳೂರು: ತಮ್ಮ ಆಪ್ತರು ಸಿನಿಮಾ ಮಾಡಿದರೆ ಕಿಚ್ಚ ಸುದೀಪ್ ತಪ್ಪದೇ ಅವರ ಬೆನ್ನಿಗೆ ನಿಂತು ಪ್ರೋತ್ಸಾಹ ಕೊಡುತ್ತಾರೆ.

ಇದೀಗ ಡಾಲಿ ಧನಂಜಯ್ ಅಭಿನಯದ ‘ಟ್ವೆಂಟಿ ಒನ್ ಅವರ್’ ಸಿನಿಮಾ ತಂಡಕ್ಕೂ ಕಿಚ್ಚನ ಆತಿಥ್ಯ ಸಿಕ್ಕಿದೆ. ಮೇ 20 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರವನ್ನು ಚಿತ್ರತಂಡ ಕಿಚ್ಚ ಸುದೀಪ್ ಗಾಗಿ ಅವರ ಮನೆಯಲ್ಲಿಯೇ ವಿಶೇಷ ಪ್ರದರ್ಶನ ನೀಡಿದೆ.

ಸಿನಿಮಾ ನೋಡಿದ ಕಿಚ್ಚ ಅದ್ಭುತ ಕತೆ, ಚೆನ್ನಾಗಿ ಮೂಡಿಬಂದಿದೆ ಎಂದು ಹೊಗಳಿದ್ದಾರೆ. ಜೊತೆಗೆ ತಮ್ಮ ಮನೆಗೆ ಬಂದ ಇಡೀ ಚಿತ್ರತಂಡಕ್ಕೆ ಸ್ವತಃ ತಾವೇ ಕೈಯಾರೆ ಅಡುಗೆ ಮಾಡಿ ಉಣಬಡಿಸಿ ಆತಿಥ್ಯ ನೀಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೀರೋಯಿನ್ ದಪ್ಪಗಾದ್ರೆ ಡುಮ್ಮಿ ಅಂತ ಕರೀತಾರೆ, ಹೀರೋ ಹೇಗಿದ್ರೂ ನಡೆಯುತ್ತೆ: ರಮ್ಯಾ ಕಿಡಿ