Select Your Language

Notifications

webdunia
webdunia
webdunia
webdunia

ಹೀರೋಯಿನ್ ದಪ್ಪಗಾದ್ರೆ ಡುಮ್ಮಿ ಅಂತ ಕರೀತಾರೆ, ಹೀರೋ ಹೇಗಿದ್ರೂ ನಡೆಯುತ್ತೆ: ರಮ್ಯಾ ಕಿಡಿ

ಹೀರೋಯಿನ್ ದಪ್ಪಗಾದ್ರೆ ಡುಮ್ಮಿ ಅಂತ ಕರೀತಾರೆ, ಹೀರೋ ಹೇಗಿದ್ರೂ ನಡೆಯುತ್ತೆ: ರಮ್ಯಾ ಕಿಡಿ
ಬೆಂಗಳೂರು , ಬುಧವಾರ, 18 ಮೇ 2022 (09:57 IST)
ಬೆಂಗಳೂರು: ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಹೋಗಿ ಉದಯೋನ್ಮುಖ ನಟಿ ಚೇತನಾ ರಾಜ್ ಸಾವನ್ನಪ್ಪಿದ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗದವರ ಮನಸ್ಥಿತಿ ಬಗ್ಗೆ ಕಿಡಿ ಕಾರಿದ್ದಾರೆ.

ಹೀರೋಯಿನ್ ಕೊಂಚ ದಪ್ಪವಾಗಿದ್ರೂ ಡುಮ್ಮಿ, ಬುಡ್ಡಿ ಎಂದು ಹೀಗೆಳೆಯುತ್ತಾರೆ. ಆದರೆ ಹೀರೋ 65 ವರ್ಷ ಕಳೆದ್ರೂ ಕೂದಲು ಇಲ್ಲದೇ, ಕೆನ್ನೆ ಗುಳಿ ಬಿದ್ದರೂ ವಿಗ್ ಹಾಕಿ ಹೀರೋ ಆಗಿ ಉಳಿಯುತ್ತಾರೆ. ಚಿತ್ರರಂಗದ ಈ ಮನಸ್ಥಿತಿ ಬದಲಾಗಬೇಕು ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನೂ ಕಾಲಿನ ಆಪರೇಷನ್ ಗೊಳಗಾದ ಮೇಲೆ ತೂಕ ಹೆಚ್ಚಾಯ್ತು. ತೂಕ ಹೆಚ್ಚಿಸಿಕೊಳ್ಳಲು ನನ್ನದೇ ನಿಯಮ ಮತ್ತು ನಿಬಂಧನೆಗಳನ್ನು ಅನುಸರಿಸುತ್ತಿದ್ದೇನೆ. ಪುರುಷ ಮತ್ತು ಮಹಿಳೆಯರ ನಡುವೆ ಈ ಅಲಿಖಿತ ವ್ಯತ್ಯಾಸ ಮೊದಲು ತೊಲಗಬೇಕು ಎಂದು ರಮ್ಯಾ ಆಕ್ರೋಶದಿಂದ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಬಳಿ ಬ್ಯಾಟಿಂಗ್ ಟಿಪ್ಸ್ ಪಡೆಯುತ್ತಿದ್ದಾರಂತೆ ಅನುಷ್ಕಾ ಶರ್ಮಾ