Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣನ ಮೊದಲ ಹಾಡು ಬಿಡುಗಡೆಗೆ ಕೊನೆಗೂ ಕೂಡಿಬಂತು ಮುಹೂರ್ತ

ವಿಕ್ರಾಂತ್ ರೋಣನ ಮೊದಲ ಹಾಡು ಬಿಡುಗಡೆಗೆ ಕೊನೆಗೂ ಕೂಡಿಬಂತು ಮುಹೂರ್ತ
ಬೆಂಗಳೂರು , ಭಾನುವಾರ, 22 ಮೇ 2022 (08:30 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ ಸಿನಿಮಾ ವಿಕ್ರಾಂತ್ ರೋಣ ಹಾಡಿನ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.

ಮೇ 16 ರಂದು ಚಿತ್ರದ ಬಗ್ಗೆ ಅಪ್ ಡೇಟ್ ಕೊಡುವುದಾಗಿ ಚಿತ್ರತಂಡ ಪ್ರಕಟಿಸಿದಾಗ ಹಾಡಿನ ಕುರಿತಾದ ಅಪ್ ಡೇಟ್ ಇರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದು ಹುಸಿಯಾಗಿತ್ತು.

ಇದೀಗ ಕೊನೆಗೂ ಮೊದಲ ಹಾಡಿನ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ಸುದೀಪ್ ಹೆಜ್ಜೆ ಹಾಕಿರುವ ‘ರಾರಾ ರಕ್ಕಮ್ಮ’ ಹಾಡಿನ ಲಿರಿಕಲ್ ವಿಡಿಯೋ ಕನ್ನಡ ಭಾಷೆಯಲ್ಲಿ ಸೋಮವಾರ
3.05 ಕ್ಕೆ ಬಿಡುಗಡೆಯಾಗಲಿದೆ. ಇದೇ ಹಾಡು ಹಿಂದಿಯಲ್ಲಿ ಮೇ 24 ರಂದು, ತೆಲುಗಿನಲ್ಲಿ 25 ರಂದು ತಮಿಳಿನಲ್ಲಿ ಮೇ 26 ರಂದು ಮತ್ತು ಮಲಯಾಳಂನಲ್ಲಿ ಮೇ 27 ರಂದು ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂ.ಎನ್ ಟಿಆರ್ ಬರ್ತ್ ಡೇ ದಿನವೇ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಅನೌನ್ಸ್