ಹೈದರಾಬಾದ್: ಇಂದು ಜೂ.ಎನ್ ಟಿಆರ್ ಜನ್ಮದಿನವಿದ್ದು, ಅವರ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ.
ಪ್ರಶಾಂತ್ ನೀಲ್ ಜೊತೆಗೆ ಜೂ.ಎನ್ ಟಿಆರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ಕನ್ ಫರ್ಮ್ ಆಗಿದ್ದು, ಇಂದು ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ. ಜೊತೆಗೆ ಪವರ್ ಫುಲ್ ಕ್ಯಾಪ್ಷನ್ ಕೂಡಾ ನೀಡಲಾಗಿದೆ.
ಪುಷ್ಪ ಸಿನಿಮಾಗೆ ಬಂಡವಾಳ ಹಾಕಿದ್ದ ಮೈತ್ರಿ ಮೂವೀಸ್ ನಿರ್ಮಾಣ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹಾಕುತ್ತಿದೆ. ಪೋಸ್ಟರ್ ನೋಡಿದರೇ ಇದೊಂದು ಆಕ್ಷನ್ ಥ್ರಿಲ್ಲರ್ ಎನ್ನುವುದು ಪಕ್ಕಾ ಆಗಿದೆ.