Publish Date: Fri, 27 May 2022 (08:50 IST)
Updated Date: Fri, 27 May 2022 (09:11 IST)
ಬೆಂಗಳೂರು: ಮತ್ತೊಂದು ಶುಭ ಶುಕ್ರವಾರ ಬಂದಿದ್ದು, ಮತ್ತಷ್ಟು ಸಿನಿಮಾಗಳ ರಿಲೀಸ್ ಸಮಾಚಾರ ಹೊತ್ತು ತಂದಿದೆ.
ಪ್ರತಿಭಾವಂತ ನಟರ ಗುಂಪು ಒಂದೇ ಕಡೆ ಸೇರಿದರೆ ಏನಾಗುತ್ತದೆ? ಅದೇ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾದಲ್ಲಿ ಆಗುತ್ತಿದೆ. ಕಾಣೆಯಾದವರ ಬಗ್ಗೆ ಪ್ರಕಟಣೆ ಎಂಬ ಸಿನಿಮಾ ಇಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಟ್ರೈಲರ್, ಪ್ರಚಾರದಿಂದ ಎಲ್ಲರ ಗಮನಸೆಳೆದಿದೆ. ರಂಗಾಯಣ ರಘು, ತಬಲಾ ನಾಣಿ, ಚಿಕ್ಕಣ್ಣ, ಆಶಿಕಾ ರಂಗನಾಥ್ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ.
ಇನ್ನು, ರಂಗಾಯಣ ರಘು, ಮಯೂರಿ ಕ್ಯಾತರಿ ಮುಂತಾದವರು ಅಭಿನಯಿಸಿರುವ ಹೊಸಬರ ವೀಲ್ ಚೇರ್ ರೋಮಿಯೋ ಎಂಬ ಸಿನಿಮಾ ಇಂದು ತೆರೆ ಕಾಣುತ್ತಿದೆ. ಇದೂ ಕೂಡಾ ಟ್ರೈಲರ್ ನಿಂದಲೇ ಎಲ್ಲರ ಗಮನ ಸೆಳೆದಿದೆ. ಇದಲ್ಲದೆ ಲೂಸ್ ಮಾದ ಯೋಗಿ ನಾಯಕರಾಗಿರುವ ಕಿರಿಕ್ ಶಂಕರ್, ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಕುಮಾರ್ ನಾಯಕರಾಗಿರುವ ಸೀತಾಯಣ ಸಿನಿಮಾ ಇಂದೇ ತೆರೆಗೆ ಬರಲಿದೆ.