Select Your Language

Notifications

webdunia
webdunia
webdunia
Thursday, 17 April 2025
webdunia

ಕನ್ನಡದಲ್ಲಿ ಕಾಸ್ಟಿಂಗ್ ಕೌಚ್ ಹೇಳಿಕೆ ನೀಡಿದ ತೆಲುಗು ನಿರ್ದೇಶಕನ ವಿರುದ್ಧ ರಾಘವೇಂದ್ರ ರಾಜ್ ಕುಮಾರ್ ಗರಂ

ಗೀತ ಕೃಷ್ಣ
ಬೆಂಗಳೂರು , ಬುಧವಾರ, 25 ಮೇ 2022 (16:59 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇತ್ತು. ಅದಕ್ಕೆ ಕನ್ನಡದ ಸಹವಾಸವೇ ಬೇಡ ಎಂದು ಬಂದು ಬಿಟ್ಟೆ ಎಂದಿದ್ದ ತೆಲುಗು ನಿರ್ದೇಶಕ ಗೀತ ಕೃಷ್ಣ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಸಿನಿಮಾ ಬಗ್ಗೆ ತಾವು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಮೇಲೆ ಸ್ಪಷ್ಟನೆ ನೀಡಿರುವ ಗೀತಾ ಕೃಷ್ಣ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ತೇಪೆ ಹಾಕಲು ಯತ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ‘ನಮ್ಮ ಭಾಷೆ ಬೆಳೆಯುತ್ತಾ ಇದೆ. ಪ್ರಪಂಚದಾದ್ಯಂತ ಕನ್ನಡ ಭಾಷೆಯ ತಾಕತ್ತು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಯಾರೋ ಏನೋ ಮಾತಾಡಿದರೆ ಅದರ ಬಗ್ಗೆ ಕಿವಿಗೊಡುವುದು ಬೇಡ. ನಾವು ಬೆಳೆಯುತ್ತಿರುವ ಕಾರಣ ಅವರು ಮಾತನಾಡುತ್ತಾರೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಸಾಥ್