Select Your Language

Notifications

webdunia
webdunia
webdunia
webdunia

ಡಾ.ರಾಜ್ ಹುಟ್ಟೂರಿನಲ್ಲಿ ರಾಘಣ್ಣ ಹೊಸ ಚಿತ್ರದ ಮುಹೂರ್ತ

ಡಾ.ರಾಜ್ ಹುಟ್ಟೂರಿನಲ್ಲಿ ರಾಘಣ್ಣ ಹೊಸ ಚಿತ್ರದ ಮುಹೂರ್ತ
ಬೆಂಗಳೂರು , ಗುರುವಾರ, 10 ಮಾರ್ಚ್ 2022 (11:53 IST)
ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರದ ಮುಹೂರ್ತ ಡಾ.ರಾಜ್ ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ನೆರವೇರಲಿದೆ.

‘ಖಡಕ್ ಹಳ್ಳಿ ಹುಡುಗರು’ ಎನ್ನುವ ಶೀರ್ಷಿಕೆಯ ಸಿನಿಮಾ ಸೆಟ್ಟೇರುತ್ತಿದೆ. ಈ ಸಿನಿಮಾದಲ್ಲಿ ರಾಘಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಈ ಸಿನಿಮಾದ ಬಹುತೇಕ ಚಿತ್ರೀಕರಣ ಡಾ.ರಾಜ್ ಅವರ ಮನೆ, ಶಾಲೆ, ಓಡಾಡುತ್ತಿದ್ದ ಜಾಗಗಳಲ್ಲೇ ನಡೆಯಲಿದೆಯಂತೆ. ಚಿತ್ರದ ಮುಹೂರ್ತಕ್ಕೆ ಡಾ.ರಾಜ್ ಸಹೋದರಿ ನಾಗಮ್ಮ ಕೈಲೇ ಪೂಜೆ ನಡೆಸಲಿದ್ದಾರಂತೆ. ಈ ಮೊದಲು ಡಾ.ರಾಜ್ ಅಭಿನಯಿಸಿದ್ದ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಸಿನಿಮಾ ಶೂಟಿಂಗ್ ಇಲ್ಲಿ ನಡೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ಶಿಖರ್ ಧವನ್ ರನ್ನು ಭೇಟಿ ಮಾಡಿದ ಹರ್ಷಿಕಾ ಪೂಣಚ್ಚ