Publish Date: Thu, 10 Mar 2022 (09:40 IST)
Updated Date: Thu, 10 Mar 2022 (09:59 IST)
ಬೆಂಗಳೂರು: ಸದ್ಯಕ್ಕೆ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ರನ್ನು ನಟಿ ಹರ್ಷಿಕಾ ಪೂಣಚ್ಚ ಭೇಟಿ ಮಾಡಿದ್ದಾರೆ.
ಕಾರ್ಯಕ್ರಮವೊಂದಕ್ಕೆ ಕೊಡವ ಶೈಲಿಯಲ್ಲಿ ಸೀರೆ ಉಟ್ಟುಕೊಂಡು ಹೋಗಿದ್ದ ಹರ್ಷಿಕಾ, ಶಿಖರ್ ಧವನ್ ರನ್ನು ಭೇಟಿ ಮಾಡಿದ ಕ್ಷಣಗಳ ವಿಡಿಯೋ ಹಂಚಕೊಂಡಿದ್ದಾರೆ.
ಹರ್ಷಿಕಾ ಬಳಿ ಧವನ್ ಕೊಡವ ಸಂಸ್ಕೃತಿಯ ಬಗ್ಗೆ ಕೇಳಿತಿಳಿದುಕೊಂಡರು. ಅದರಲ್ಲೂ ಹರ್ಷಿಕಾ ಸೀರೆ ಉಟ್ಟುಕೊಂಡಿದ್ದ ಶೈಲಿ ಧವನ್ ರ ಗಮನಸೆಳೆದಿತ್ತು. ಇದರ ಬಗ್ಗೆ ಹರ್ಷಿಕಾ ವಿವರಣೆ ನೀಡಿದರು.