Publish Date: Wed, 09 Mar 2022 (09:10 IST)
Updated Date: Wed, 09 Mar 2022 (09:15 IST)
ಮುಂಬೈ: ಟೀಂ ಇಂಡಿಯಾದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಅತ್ತ ಫಿಟ್ನೆಸ್ ಸಾಬೀತುಪಡಿಸುತ್ತಿಲ್ಲ, ಇತ್ತ ರಣಜಿಯಲ್ಲೂ ಆಡಲು ಒಲವು ತೋರುತ್ತಿಲ್ಲ. ಆದರೆ ಈಗ ಪಾಂಡ್ಯಗೆ ಬಿಸಿಸಿಐ ಖಡಕ್ ಸೂಚನೆ ಕೊಟ್ಟಿದೆ.
ರಾಷ್ಟ್ರೀಯ ತಂಡಕ್ಕೆ ಹಾರ್ದಿಕ್ ಮರಳಬೇಕಾದರೆ ಅವರು ಫಿಟ್ನೆಸ್ ಸಾಬೀತುಪಡಿಸಬೇಕು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಈಗಾಗಲೇ ಹೇಳಿದ್ದರು. ಹಾಗಿದ್ದರೂ ಹಾರ್ದಿಕ್ ಅದನ್ನು ನಿರ್ಲಕ್ಷಿಸಿ ಕೇವಲ ಐಪಿಎಲ್ ಕಡೆಗೆ ಗಮನ ಹರಿಸಿದ್ದರು.
ಆದರೆ ಭಾರತ ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಈಗಾಗಲೇ ಯೋಜನೆ ಹಾಕಿಕೊಳ್ಳುತ್ತಿದೆ. ಆದರೆ ಹಾರ್ದಿಕ್ ಬಿಸಿಸಿಐ ಸೂಚನೆಗೂ ಕ್ಯಾರೇ ಎನ್ನದೇ ಐಪಿಎಲ್ ಕಡೆಗೆ ಗಮನಹರಿಸುವ ಕಾರಣಕ್ಕೆ ತಕ್ಷಣವೇ ಬೆಂಗಳೂರಿನ ಎನ್ ಸಿಎ ಕೇಂದ್ರಕ್ಕೆ ಹಾಜರಾಗಿ ಪುನಶ್ಚೇತನ ಕಾರ್ಯದಲ್ಲಿ ಭಾಗಿಯಾಗುವಂತೆ ಬಿಸಿಸಿಐ ಖಡಕ್ ಸೂಚನೆ ನೀಡಿದೆ.