Publish Date: Thu, 10 Mar 2022 (09:01 IST)
Updated Date: Thu, 10 Mar 2022 (09:15 IST)
ಬೆಂಗಳೂರು: ಎಬಿಡಿ ವಿಲಿಯರ್ಸ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿತ್ತು. ಹೊಡೆಬಡಿಯ ಆಟಗಾರನನ್ನು ಮತ್ತೆ ಆರ್ ಸಿಬಿ ಪರ ಆಡುವುದನ್ನು ನೋಡಲಾಗದು ಎಂದು ನಿರಾಸೆಯಲ್ಲಿದ್ದವರಿಗೆ ಈಗ ಸಿಹಿ ಸುದ್ದಿ ಕಾದಿದೆ.
ಎಬಿಡಿ ಮತ್ತೆ ಆರ್ ಸಿಬಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ. ರಾಯಲ್ ಚಾಲೆಂಜರ್ಸ್ ತಂಡದ ಮೆಂಟರ್ ಆಗಿ ತಂಡಕ್ಕೆ ಮರಳಲಿದ್ದಾರೆ.
ಮಾರ್ಚ್ 12 ರಂದು ಆರ್ ಸಿಬಿ ನೂತನ ನಾಯಕನ ಘೋಷಣೆ ಮಾಡಲಿದ್ದು, ಅದೇ ದಿನ ಎಬಿಡಿ ಪುನರಾಗಮನವನ್ನು ಖಚಿತಪಡಿಸುವ ಸಾಧ‍್ಯತೆಯಿದೆ.