Publish Date: Sun, 06 Mar 2022 (08:50 IST)
Updated Date: Sun, 06 Mar 2022 (09:21 IST)
ಮುಂಬೈ: ಐಪಿಎಲ್ 2022 ರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿಳಿಯಲಿರುವ ವಿದೇಶೀ ಆಟಗಾರರಿಗೆ ಇಲ್ಲಿ ಕ್ವಾರಂಟೈನ್ ಕಡ್ಡಾಯ ನಿಯಮ ತಲೆನೋವಾಗಿದೆ.
ಮಾರ್ಚ್ 26 ರಿಂದ ಕೂಟ ಆರಂಭವಾಗಲಿದೆ. ಇದಕ್ಕೂ ಮೊದಲು ವಿದೇಶೀ ಆಟಗಾರರು ಐದು ದಿನಗಳ ಕಡ್ಡಾಯ ಕ್ವಾರಂಟೈನ್ ಗೊಳಗಾಗಬೇಕಾಗುತ್ತದೆ. ರಾಷ್ಟ್ರೀಯ ತಂಡದ ಪಂದ್ಯ ಮುಗಿಸಿ ಐಪಿಎಲ್ ಆಡಲು ಭಾರತಕ್ಕೆ ಬಂದಿಳಿಯಲಿರುವ ಕ್ರಿಕೆಟಿಗರಿಗೆ ಇದರಿಂದ ಆರಂಭದ ಕೆಲವು ಪಂದ್ಯಗಳಲ್ಲಿ ಭಾಗಿಯಾಗುವುದು ಕಷ್ಟವಾಗುತ್ತದೆ.
ಇದು ಕೆಲವು ಫ್ರಾಂಚೈಸಿಗಳಿಗೆ ತಲೆನೋವಾಗಿದೆ. ಅದರಲ್ಲೂ ವಿದೇಶೀ ಆಟಗಾರರನ್ನು ಹೊಂದಿರುವ ಫ‍್ರಾಂಚೈಸಿಗಳಿಗೆ ಬಿಸಿಸಿಐನ ಕಡ್ಡಾಯ ಕ್ವಾರಂಟೈನ್ ನಿಯಮ ಸಂಕಷ್ಟ ತಂದಿದೆ.