Select Your Language

Notifications

webdunia
webdunia
webdunia
webdunia

ಜಡೇಜಾಗೆ ಡಬಲ್ ಸೆಂಚುರಿ ಮಾಡಲು ಬಿಡದ ಕ್ಯಾಪ್ಟನ್ ರೋಹಿತ್ ಗೆ ಟೀಕೆ

ಜಡೇಜಾಗೆ ಡಬಲ್ ಸೆಂಚುರಿ ಮಾಡಲು ಬಿಡದ ಕ್ಯಾಪ್ಟನ್ ರೋಹಿತ್ ಗೆ ಟೀಕೆ
ಮೊಹಾಲಿ , ಭಾನುವಾರ, 6 ಮಾರ್ಚ್ 2022 (08:40 IST)
ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ದ್ವಿಶತಕ ಹೊಸ್ತಿಲಿನಲ್ಲಿದ್ದಾಗ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನು ನೆಟ್ಟಿಗರು ಟೀಕಿಸಿದ್ದಾರೆ.

ರೋಹಿತ್ ಶರ್ಮಾ ದ್ವಿಶತಕಗಳಿಗೆ ಹೆಸರುವಾಸಿ. ಆದರೆ ಅವರಿಗೆ ಇನ್ನೊಬ್ಬರು ದ್ವಿಶತಕ ಬಾರಿಸುವುದನ್ನು ನೋಡಲು ಅಸೂಯೆಯಾಗುತ್ತಿರಬೇಕು ಎಂದು ಕೆಲವರು ಜರೆದಿದ್ದಾರೆ.

ರವೀಂದ್ರ ಜಡೇಜಾ 175 ರನ್ ಗಳಿಸಿದ್ದಾಗ ರೋಹಿತ್ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇನ್ನು 25 ರನ್ ಗಳಿಸಿದ್ದರೆ ಜಡೇಜಾಗೆ ಅಪರೂಪದ ದ್ವಿಶತಕದ ಸಾಧನೆ ಮಾಡಬಹುದಾಗಿತ್ತು. ಆದರೆ ಆ ಅವಕಾಶವನ್ನು ರೋಹಿತ್ ತಪ್ಪಿಸಿದರು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಈ ಹಿಂದೆ ಸಚಿನ್ ತೆಂಡುಲ್ಕರ್ 194 ರನ್ ಗಳಿಸಿದ್ದಾಗ ರಾಹುಲ್ ದ್ರಾವಿಡ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಘಟನೆಗೆ ಹೋಲಿಸಿ ಕೆಲವರು ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್