Publish Date: Thu, 10 Mar 2022 (09:50 IST)
Updated Date: Thu, 10 Mar 2022 (10:12 IST)
ಕೊಚ್ಚಿ: ಕೇರಳ ವೇಗಿ ಶ್ರೀಶಾಂತ್ ದೇಶೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರು ವಿದೇಶೀ ಲೀಗ್ ಗಳಲ್ಲಿ ಆಡುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ವೇಗಿ ಶ್ರೀಶಾಂತ್ ಬಳಿಕ ಕಳಂಕ ಮುಕ್ತರಾದರೂ ಅವರಿಗೆ ಐಪಿಎಲ್ ಅಥವಾ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲೇ ಇಲ್ಲ. ಇತ್ತೀಚೆಗೆ ಕೇರಳ ಪರ ರಣಜಿ ಆಡಿದ್ದರು.
ಆದರೆ ಈಗ ದೇಶೀಯ ಕ್ರಿಕೆಟ್ ಗೂ ನಿವೃತ್ತಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ವಿದೇಶೀ ಲೀಗ್ ಪಂದ್ಯಗಳಲ್ಲಿ ಆಡುವ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೋಚಿಂಗ್ ಬಗ್ಗೆಯೂ ಚಿಂತನೆ ನಡೆಸಿದ್ದಾರಂತೆ.