ಬೆಂಗಳೂರು: ಪವರ್ ಟಾರ್ ಪುನೀತ್ ರಾಜ್ ಕುಮಾರ್ ಅಗಲುವಿಕೆಯ ಬಳಿಕ ಪಿಆರ್ ಕೆ ಪ್ರೊಡಕ್ಷನ್ ಕತೆ ಏನಾಗಬಹುದು ಎಂಬ ಪ್ರಶ್ನೆಗೆ ರಾಘವೇಂದ್ರ ರಾಜ್ ಕುಮಾರ್ ಉತ್ತರ ನೀಡಿದ್ದಾರೆ.
ಪಿಆರ್ ಕೆ ಪ್ರೊಡಕ್ಷನ್ ಪುನೀತ್ ಕನಸಿನ ಕೂಸು. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎನ್ನುವ ದೃಷ್ಟಿಯಿಂದ ಈ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು. ಈವರೆಗೆ ಅನೇಕರಿಗೆ ಅವಕಾಶ ನೀಡಲಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಈ ನಿರ್ಮಾಣ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ನಡೆಸಿಕೊಂಡು ಹೋಗಲಿದ್ದಾರೆ ಎಂದಿದ್ದಾರೆ. ಅವನು ಬದುಕಿದ್ದಾಗಲೇ ಪಿಆರ್ ಕೆ ಪ್ರೊಡಕ್ಷನ್ ಕೆಲಸಗಳಲ್ಲಿ ಹೆಂಡತಿಯನ್ನೂ ಜೊತೆಗೇ ಸೇರಿಸಿಕೊಂಡಿದ್ದ. ಬಹುಶಃ ಅವನಿಲ್ಲದೇ ಇದ್ದಾಗಲೂ ಸಂಸ್ಥೆ ನೋಡಿಕೊಂಡು ಹೋಗಲು ತಯಾರು ಮಾಡಿರಬೇಕು. ನಾವು ಇನ್ನು ಅವರ ಜೊತೆಗಿರುತ್ತೇವೆ ಎಂದಿದ್ದಾರೆ ರಾಘಣ್ಣ.