Publish Date: Sun, 12 Dec 2021 (14:05 IST)
Updated Date: Sun, 12 Dec 2021 (14:50 IST)
ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ನೆನಪಿಗಾಗಿ ಕಟ್ಟಾಭಿಮಾನಿಗಳಿಂದ ಕಾಲ್ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಚಿವ ವಿ. ಸೋಮಣ್ಣ & ಸಚಿವ ಕೆ. ಗೋಪಾಲಯ್ಯ ಅವರು ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿದರು.ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ನಿಂದ ಕಂಠೀರವ ಸ್ಟುಡಿಯೋವರೆಗೆ ಅಭಿಮಾನಿಗಳು ಪಾದಯಾತ್ರೆ ಮಾಡಲಿದ್ದು,
ಅಪ್ಪು ಸಮಾಧಿಯಲ್ಲಿ ನಮನ ಸಲ್ಲಿಸಿದ್ದಾರೆ. ಹೀಗಾಗಲೇ ನೂರಾರು ಜನ ಅಪ್ಪು ಅಭಿಮಾನಿಗಳು, ದೂರದ ಊರುಗಳಿಂದ ಬೆಂಗಳೂರಿಗೆ ತಲುಪಿ ಗೌರವ ನಮನ ಸಲ್ಲಿದ್ದಾರೆ. ಅದರಂತೆ ಇಂದು ಸಹಾ ಅಪ್ಪು ಅಭಿಮಾನಿಗಳಿಂದ ಕಂಠೀರವ ಸ್ಟುಡಿಯೋ ವರೆಗೆ ಪಾದಯಾತ್ರೆ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.