ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್-ಸುಹಾಸಿನಿ ಅಭಿನಯದ ಬಂಧನ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ? ಒಂದು ಕಾಲದ ಸೂಪರ್ ಹಿಟ್ ಸಿನಿಮಾ ಇದೀಗ ಮತ್ತೆ ಎರಡನೇ ಭಾಗವಾಗಿ ತೆರೆಗೆ ಬರಲಿದೆ.
ಬಂಧನ ಸಿನಿಮಾ ನಿರ್ದೇಶಿಸಿದ್ದ ರಾಜೇಂದ್ರ ಸಿಂಗ್ ಬಾಬು ಈಗ ಬಂಧನ 2 ಸಿನಿಮಾ ತಯಾರಿಯಲ್ಲಿದ್ದಾರೆ. ಈಗಾಗಲೇ ಇದರ ಮುಹೂರ್ತ ಕೂಡಾ ನಡೆದಿದೆ.
ತಮ್ಮ ಪುತ್ರ ಆದಿತ್ಯರನ್ನು ನಾಯಕರಾಗಿ ಮಾಡಿ ಈ ಸಿನಿಮಾ ಮಾಡುತ್ತಿದ್ದಾರೆ ಬಾಬು. ಜೊತೆಗೆ ಭಾಗ 1 ರಲ್ಲಿ ನಾಯಕಿಯಾಗಿದ್ದ ಖ‍್ಯಾತ ನಟಿ ಸುಹಾಸಿನಿ ಬಂಧನ 2 ರಲ್ಲಿ ಬಣ್ಣ ಹಚ್ಚಲಿದ್ದಾರೆ. 80 ರ ದಶಕದಲ್ಲಿ ಮೋಡಿ ಮಾಡಿದ್ದ ಈ ಸಿನಿಮಾ ಮತ್ತೆ ತಮ್ಮ ಮಗನಿಗೂ ಅದೃಷ್ಟ ತಂದುಕೊಡಬಹುದು ಎಂಬ ನಂಬಿಕೆಯಲ್ಲಿ ರಾಜೇಂದ್ರ ಸಿಂಗ್ ಬಾಬು ಇದ್ದಾರೆ.