Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಎಷ್ಟೆಲ್ಲಾ ಗೋಳು ಹೊಯ್ಕೊಳ್ತಾರೆ ಯಶ್! ಸಾಕ್ಷಿ ಕೊಟ್ಟ ರಾಧಿಕಾ ಪಂಡಿತ್

ಪತ್ನಿಯನ್ನು ಎಷ್ಟೆಲ್ಲಾ ಗೋಳು ಹೊಯ್ಕೊಳ್ತಾರೆ ಯಶ್! ಸಾಕ್ಷಿ ಕೊಟ್ಟ ರಾಧಿಕಾ ಪಂಡಿತ್
ಬೆಂಗಳೂರು , ಶುಕ್ರವಾರ, 10 ಡಿಸೆಂಬರ್ 2021 (10:55 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿಯನ್ನು ಹೇಗೆಲ್ಲಾ ಗೋಳು ಹೊಯ್ಕೊಳ್ತಾರೆ ಗೊತ್ತಾ? ಸ್ವತಃ ರಾಧಿಕಾ ಪಂಡಿತ್ ಇದನ್ನು ಸಾಕ್ಷ್ಯ ಸಮೇತ ತೋರಿಸಿದ್ದಾರೆ.

ನಿನ್ನೆ ಯಶ್-ರಾಧಿಕಾ ದಂಪತಿಯ ವಿವಾಹ ವಾರ್ಷಿಕೋತ್ಸವವಿತ್ತು. ಇದನ್ನು ಸುಂದರ ಕಡಲತೀರಲ್ಲಿ ಕಳೆದಿರುವ ಜೋಡಿ ಈ ಸಂದರ್ಭದ ಫೋಟೋಗಳನ್ನು ಶೇರ್ ಮಾಡಿದೆ.

ರಾಧಿಕಾ ಫೋಟೋಗೆ ಪೋಸ್ ಕೊಡಲು ಹೇಳಿದರೆ ಯಶ್ ಎಷ್ಟೆಲ್ಲಾ ಆಟ ಆಡಿಸುತ್ತಾರೆ ಎಂದು ಫೋಟೋ ಸಮೇತ ಅಭಿಮಾನಿಗಳಿಗೆ ತೋರಿಸಿದ್ದಾರೆ. ಮೊದಲ ಫೋಟೋದಲ್ಲಿ ಮುಖಕ್ಕೆ ಟವೆಲ್ ಮುಚ್ಚಿಕೊಂಡಿರುವ ಯಶ್ ಬಳಿಕ ಬೇಕೆಂದೇ ವಿಚಿತ್ರವಾಗಿ ಮುಖ ಮಾಡಿಕೊಂಡು ರಾಧಿಕಾಗೆ ಆಟ ಆಡಿಸುತ್ತಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ, ಪುರುಷರನ್ನು ಫೋಟೋಗೆ ಪೋಸ್ ಕೊಡಿಸೋದೇ ಕಷ್ಟ. ಈಗ ನಿಮಗೇ ಗೊತ್ತಾಗಿರಬೇಕು ಈ ರೀತಿ ನನಗೆ ಕಾಟ ಕೊಡುತ್ತಿರುವವರು ಯಾರು ಅಂತ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುದ್ರೋಳಿ ದೇವಾಲಯಕ್ಕೆ ನಟ ಕಿಚ್ಚ ಸುದೀಪ್