Select Your Language

Notifications

webdunia
webdunia
webdunia
webdunia

ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ ಸಮಂತಾ!

ವಿಚ್ಛೇದನ
ನಟಿ ಸಮಂತಾ ಪತಿ ನಾಗಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಸಾಕಷ್ಟು ಮಾತುಗಳು ಕೇಳಿಬಂದವು,

ಸಮಂತಾ ಅವರಿಗೆ ಮಗುವನ್ನು ಪಡೆಯಲು ಇಷ್ಟವಿರಲಿಲ್ಲ ಅಥವಾ ಅವರಿಗೆ ಗರ್ಭಪಾತವಾಗಿದೆ ಎನ್ನುವ ಮಾತುಗಳು ಬಹಿರಂಗವಾಗಿಯೇ ಹೊರಬಿದ್ದಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ ವಿಚ್ಛೇದನ ನೀಡಿ ಆಗಿದೆ.

ಅದು ಮುಗಿದ ಅಧ್ಯಾಯ. ಆ ವಿಷಯವನ್ನು ಮತ್ತೇ ಮಾತಾಡುವುದಿಲ್ಲ. ಪದೇ ಪದೇ ಅದೇ ವಿಚಾರವನ್ನು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ಕಳೆದ ಅಕ್ಟೋಬರ್ 2 ರಂದು ವಿಚ್ಛೇದನ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದರು. ಅದರ ಬಳಿಕ ಹಲವು ವದಂತಿಗಳೂ ಹಬ್ಬಿದ್ದವು. ಈ ಹಿಂದೆಯೂ ಸಮಂತಾ ಕೆಲವು ಸಂದರ್ಶನಗಳಲ್ಲಿ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಪ್ರತಿಮೆಗೆ ಹೆಚ್ಚಾಯ್ತು ಬೇಡಿಕೆ!