Publish Date: Sat, 27 Nov 2021 (10:58 IST)
Updated Date: Sat, 27 Nov 2021 (11:00 IST)
ಹೈದರಾಬಾದ್: ನಾಗಚೈತನ್ಯರಿಂದ ಬೇರೆಯಾದ ಬಳಿಕ ನಟಿ ಸಮಂತಾ ಋತು ಪ್ರಭು ಇದೀಗ ನಾಗಾರ್ಜುನ ಅಕ್ಕಿನೇನಿ ಒಡೆತನದ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮದುವೆ ಮುರಿದು ಬಿದ್ದ ಬಳಿಕ ಸಮಂತಾ ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದೇಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಸಮಂತಾ ಶಾಕುಂತಲಾ ಎನ್ನುವ ಐತಿಹಾಸಿಕ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಡಬ್ಬಿಂಗ್ ಕೆಲಸಗಳಿಗೆ ಅನ್ನಪೂರ್ಣ ಸ್ಟುಡಿಯೋಗೆ ಬಂದಿದ್ದರು ಎನ್ನಲಾಗಿದೆ. ಆದರೆ ಸಮಂತಾ ದಿಡೀರ್ ಆಗಿ ತನ್ನ ಮಾಜಿ ಪತಿ ಕುಟುಂಬದವರಿಗೆ ಸೇರಿದ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು.
Krishnaveni K
Publish Date: Sat, 27 Nov 2021 (10:58 IST)
Updated Date: Sat, 27 Nov 2021 (11:00 IST)