Select Your Language

Notifications

webdunia
webdunia
webdunia
webdunia

ಒಂದು ಹಾಡಿಗೆ ಸಮಂತಾ ಪಡೆಯುತ್ತಿರುವ ಸಂಭಾವನೆ ಎಷ್ಟು?

ಒಂದು ಹಾಡಿಗೆ ಸಮಂತಾ ಪಡೆಯುತ್ತಿರುವ ಸಂಭಾವನೆ ಎಷ್ಟು?
ಮುಂಬೈ , ಶನಿವಾರ, 20 ನವೆಂಬರ್ 2021 (17:49 IST)
ವಿಚ್ಛೇದನದ ವಿಚಾರವಾಗಿ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದ ನಟಿ ಸಮಂತಾ ಬಗ್ಗೆ ಇದೀಗ ಹೊಸ ಗುಸುಗುಸು ಕೇಳಿಬಂದಿದೆ. ಅದೇನಪ್ಪಾ ಅಂದ್ರೆ, ಐಟಂ ಸಾಂಗ್ಗೆ ಹೆಜ್ಜೆ ಹಾಕಲು ನಟಿ ಸಮಂತಾ ಒಪ್ಪಿಕೊಂಡಿದ್ದಾರೆ.
ಹೌದು, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲು ನಟಿ ಸಮಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಾಡಿಗಾಗಿ ನಟಿ ಸಮಂತಾ ಬಂಪರ್ ಸಂಭಾವನೆಯನ್ನೇ ಕೇಳಿದ್ದಾರಂತೆ. ಹಾಗಂತ ಟಾಲಿವುಡ್ ತುಂಬೆಲ್ಲಾ ಗುಲ್ಲೋ ಗುಲ್ಲು..!
ಬಹು ನಿರೀಕ್ಷೆ ಹುಟ್ಟುಹಾಕಿರುವ ‘ಪುಷ್ಪ’  ಸಿನಿಮಾದ ಸ್ಪೆಷಲ್ ಡ್ಯಾನ್ಸ್ ನಂಬರ್ನಲ್ಲಿ ಸೊಂಟ ಬಳುಕಿಸಲು ನಟಿ ಸಮಂತಾ ಬರೋಬ್ಬರಿ 1.5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಸಮಂತಾ ಆಗಲಿ, ಚಿತ್ರತಂಡ ಆಗಲಿ ತುಟಿಕ್ ಪಿಟಿಕ್ ಎಂದಿಲ್ಲ.
ಬೃಹತ್ ಸೆಟ್ ತಲೆಯೆತ್ತುತ್ತಿದೆ..!
‘ಪುಷ್ಪ’ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣಕ್ಕಾಗಿ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ ತಲೆಯೆತ್ತುತ್ತಿದೆ. ಹಾಡಿಗಾಗಿ ಹೆಚ್ಚು ದುಡ್ಡು ಖರ್ಚು ಮಾಡಿ ಸ್ಪೆಷಲ್ ಸೆಟ್ ನಿರ್ಮಿಸಲಾಗಿದ್ದು, ನವೆಂಬರ್ ಕೊನೆಯ ವಾರದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.
 ‘ಪುಷ್ಪ’ ಸಿನಿಮಾದ ವಿಶೇಷ ಹಾಡಿನಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಟ್ವೀಟ್ ಮಾಡಿದೆ. ‘’ಪುಷ್ಪ’ ಚಿತ್ರದ ಐದನೇ ಹಾಡು ತುಂಬಾ ವಿಶೇಷವಾಗಿದೆ. ಹೀಗಾಗಿ, ವಿಶೇಷ ವ್ಯಕ್ತಿಯೇ ನಮ್ಮ ಹಾಡಿನಲ್ಲಿ ಕಾಣಿಸಿಕೊಳ್ಳಬೇಕಿತ್ತು. ನಾವು ಈ ಹಾಡಿನ ಬಗ್ಗೆ ಸಮಂತಾ ಜೊತೆ ಚರ್ಚೆ ಮಾಡಿದ್ವಿ. ಹಾಡಿನಲ್ಲಿ ಹೆಜ್ಜೆ ಹಾಕಲು ನಟಿ ಸಮಂತಾ ಸಮ್ಮತಿ ನೀಡಿದ್ದಾರೆ’’ ಎಂದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಟ್ವೀಟ್ ಮಾಡಿದೆ.
ಪುಷ್ಪ’ ಸಿನಿಮಾ
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಪುಷ್ಪ’. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿರುವ ‘ಪುಷ್ಪ’ ಚಿತ್ರದ ಮೊದಲ ಭಾಗ ಡಿಸೆಂಬರ್ 17, 2021 ರಂದು ಬಿಡುಗಡೆಯಾಗಲಿದೆ. ‘ಪುಷ್ಪ’ ಸಿನಿಮಾದಲ್ಲಿ ಫಹಾದ್ ಫಾಸಿಲ್, ಕನ್ನಡ ನಟ ಧನಂಜಯ್ ಮುಂತಾದವರು ಅಭಿನಯಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿಯಲ್ಲಾದ ಭಯಾನಕ ಅನುಭವ ಬಿಚ್ಚಿಟ್ಟ ನಟಿ ತಾರಾ