ಚೆನ್ನೈ: ಬಿಗ್ ಬಾಸ್ ತಮಿಳು ಆವೃತ್ತಿಯ ನಿರೂಪಕರಾಗಿದ್ದ ಖ್ಯಾತ ನಟ ಕಮಲ್ ಹಾಸನ್ ಈಗ ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರ ಸ್ಥಾನಕ್ಕೆ ಬಿಗ್ ಬಾಸ್ ತಮಿಳು ಆವೃತ್ತಿಯ ನಿರೂಪಣೆ ಜವಾಬ್ಧಾರಿಯನ್ನು ನಟಿ ರಮ್ಯಾ ಕೃಷ್ಣ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ರಮ್ಯಾ ಕೃಷ್ಣ ಈ ಮೊದಲು ತೆಲುಗಿನಲ್ಲಿ ನಾಗಾರ್ಜುನ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ನಲ್ಲಿ ನಿರೂಪಣೆ ಮಾಡಿದ್ದರು. ಹೀಗಾಗಿ ಅವರಿಗೆ ಬಿಗ್ ಬಾಸ್ ನಿರೂಪಣೆ ಹೊಸತಲ್ಲ. ಇದೇ ಕಾರಣಕ್ಕೆ ತಮಿಳು ಆವೃತ್ತಿ ನಿರೂಪಣೆಗೆ ಅವರನ್ನು ಕರೆತರಲು ಪ್ರಯತ್ನ ನಡೆದಿದೆಯಂತೆ.