Publish Date: Sat, 04 Dec 2021 (09:50 IST)
Updated Date: Sat, 04 Dec 2021 (10:04 IST)
ಬೆಂಗಳೂರು: ದಿನಕ್ಕೆ ಆರು ಬಾರಿ ಸ್ನಾನ ಮಾಡುವ ಪತಿಯ ಗೀಳು ಮನೋಭಾವದಿಂದ ಬೇಸತ್ತ ಪತಿ ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾನೆ
2009 ರಲ್ಲಿ ದಂಪತಿ ಮದುವೆಯಾಗಿತ್ತು. ಇದೀಗ ಒಂದು ಮಗುವೂ ಇದೆ. ಆದರೆ ಮಗುವಾದ ಬಳಿಕ ಪತ್ನಿಯ ಗೀಳು ಮನೋರೋಗದಿಂದ ಪತಿ ಬೇಸತ್ತು ಹೋಗಿದ್ದಾನೆ.
ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಲ್ಯಾಪ್ ಟಾಪ್, ಮೊಬೈಲ್ ಗಳನ್ನೂ ಪದೇ ಪದೇ ಸ್ವಚ್ಛ ಮಾಡುವುದು ಇತ್ಯಾದಿ ಅಭ್ಯಾಸಗಳಿಂದ ಇಬ್ಬರ ನಡುವೆ ವೈಮನಸ್ಯವೇರ್ಪಟ್ಟಿದೆ. ಇದೇ ವಿಚಾರವಾಗಿ ಪತಿ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರು ಪ್ರಕರಣವನ್ನು ಮಹಿಳಾ ಸಹಾಯವಾಣಿಗೆ ವರ್ಗಾಯಿಸಿದ್ದಾರೆ. ಇದೀಗ ಪತಿ ಪತ್ನಿಯಿಂದ ವಿಚ್ಛೇದನ ಬಯಸಿದ್ದಾನೆ.