Publish Date: Sun, 22 May 2022 (11:14 IST)
Updated Date: Sun, 22 May 2022 (08:16 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ತಮ್ಮ ಪರಂವಾ ಸ್ಟುಡಿಯೋ ನಿರ್ಮಾಣದ ಎರಡು ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡುತ್ತಿದ್ದಾರೆ. ಈ ಪೈಕಿ ಒಂದು ಮೊನ್ನೆಯೇ ಬಿಡುಗಡೆಯಾಗಿದೆ.
ಸಕುಟುಂಬ ಸಮೇತ ಎನ್ನುವ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಸಿನಿ ಮಂದಿಯಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದು ರಕ್ಷಿತ್ ಶೆಟ್ಟಿ ಉತ್ಸಾಹ ಹೆಚ್ಚಿಸಿದೆ.
ಜೂನ್ 10 ರಂದು ತಮ್ಮ ನಿರ್ಮಾಣದ ತಾವೇ ನಾಯಕರಾಗಿರುವ ಚಾರ್ಲಿ 777 ಸಿನಿಮಾವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾ ಟ್ರೈಲರ್ ಈಗಾಗಲೇ ಎಲ್ಲರಿಗೂ ಇಷ್ಟವಾಗಿದ್ದು, ಎರಡು ಬ್ಯಾಕ್ ಟು ಬ್ಯಾಕ್ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.
Krishnaveni K
Publish Date: Sun, 22 May 2022 (11:14 IST)
Updated Date: Sun, 22 May 2022 (08:16 IST)