ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವರ್ಷವಿಡೀ ಅಭಿಮಾನಿಗಳಿಗೆ ರಸದೌತಣ ನೀಡಲು ರೆಡಿಯಾಗಿದ್ದಾರೆ. ಮೊನ್ನೆಯಷ್ಟೇ ಸಪ್ತಸಾಗರದಾಚೆ ಎಲ್ಲೊ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ರಕ್ಷಿತ್ 10 ವರ್ಷಗಳ ಬಳಿಕ ಹೇಗಿರ್ತಾರೆ ಎಂದು ತೋರಿಸಿಕೊಟ್ಟಿತ್ತು.
ಆ ಪೋಸ್ಟರ್ ನೋಡಿಯೇ ಫ್ಯಾನ್ಸ್ ರಕ್ಷಿತ್ ಲುಕ್ ನೋಡಿಯೇ ಅದ್ಭುತ ಎಂದು ಕೊಂಡಾಡಿದ್ದರು. ಇದೀಗ ರಕ್ಷಿತ್ ಈ ಪೋಸ್ಟರ್ ಗಾಗಿ ಮಾಡಿದ್ದ ಫೋಟೋ ಶೂಟ್ ನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಈ ಫೋಟೋದಲ್ಲಿ ರಕ್ಷಿತ್ ಮುಖದ ತುಂಬಾ ಗಾಯದ ಕಲೆಯಿದ್ದು ಭೀಭತ್ಸವಾಗಿದೆ. ಫೋಟೋ ನೋಡಿದ ನೆಟ್ಟಿಗರು ಭಯ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಾವು ಚಾರ್ಲಿ 777 ಮೂಡ್ ನಲ್ಲಿದ್ದೇವೆ. ಇಂತಹ ಫೋಟೋ ಹಾಕಿ ನಮ್ಮ ಮೂಡ್ ಬದಲಾಯಿಸಬೇಡಿ ಎಂದು ಸಣ್ಣ ಸಲಹೆಯನ್ನೂ ಕೊಟ್ಟಿದ್ದಾರೆ.