ಬೆಂಗಳೂರು: ನಟಿ ಶ್ರುತಿ ಕೃಷ್ಣ ನಟನೆ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಅದು ಬಿಟ್ಟರೆ ಅವರು ಅಪ್ಪಟ ಮಣ್ಣಿನ ಮಗಳು.
ಆಗಾಗ ತಮ್ಮ ಜಮೀನಿಗೆ ಹೋಗಿ ಕೆಲಸ ಮಾಡುತ್ತಿರುತ್ತಾರೆ. ಇದೀಗ ತಮ್ಮ ಕುಟುಂಬಸ್ಥರೊಂದಿಗೆ ಹೊಲದಲ್ಲಿ ನೇಗಿಲು ಹಿಡಿದು ಹೊಲ ಉಳುಮೆ ಮಾಡಿರುವ ಶ್ರುತಿ ಬಳಿಕ ಮಗಳು, ಅಮ್ಮಂದಿರೊಂದಿಗೆ ಬೀಜ ಬಿತ್ತಿ ತಾವು ಪಕ್ಕಾ ಮಣ್ಣಿನ ಮಗಳು ಎಂದು ಸಾಬೀತುಪಡಿಸಿದ್ದಾರೆ.
ಇದು ನನ್ನ ಬಹುದಿನಗಳ ಕನಸಾಗಿತ್ತು. ನಾನೇ ಉತ್ತಿ-ಬಿತ್ತಿ ಬೆಳೆಯಬೇಕೆಂಬ ಕನಸು ಈಗ ನನಸಾಗಿದೆ ಎಂದು ಶ್ರುತಿ ಹೇಳಿಕೊಂಡಿದ್ದಾರೆ.