Publish Date: Tue, 24 May 2022 (11:01 IST)
Updated Date: Tue, 24 May 2022 (11:08 IST)
ಹೈದರಾಬಾದ್: ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ 2011 ರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.
ಈ ವೇಳೆ ಅಲ್ಲು ಅರ್ಜುನ್ ತಮ್ಮ ಮಾವನ ಮನೆಯಿಂದ ವರದಕ್ಷಿಣೆ ರೂಪದಲ್ಲಿ ಭರ್ಜರಿ ಕೊಡುಗೆ ಪಡೆದಿದ್ದರು ಎಂಬ ಸುದ್ದಿಯಿತ್ತು. ಇದರ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಅಲ್ಲು ಮಾವ ಚಂದ್ರಶೇಖರ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲು ತಮ್ಮ ಸ್ವಂತ ಪರಿಶ್ರಮದಿಂದ ಇಂದು ಇಷ್ಟು ದೊಡ್ಡ ನಟನಾಗಿ ಬೆಳೆದಿದ್ದಾರೆ. ಮದುವೆ ವೇಳೆ ಅವರು ಯಾವುದೇ ವರದಕ್ಷಿಣೆ ತೆಗೆದುಕೊಂಡಿರಲಿಲ್ಲ. ಅವರ ಬಳಿ ಸಾಕಷ್ಟು ಆಸ್ತಿಯಿದೆ. ಅಲ್ಲು ಅರ್ಜುನ್ ಯಾವತ್ತೂ ವರದಕ್ಷಿಣೆ ವಿರೋಧಿ. ನಾವು ಅವರಿಗೆ ಏನೇ ಕೊಟ್ಟಿದ್ದರೂ ಅದು ಏನೇನೂ ದೊಡ್ಡದಲ್ಲ ಎಂದು ಚಂದ್ರಶೇಖರ್ ರೆಡ್ಡಿ ಅಳಿಯನ ಬಗ್ಗೆ ಪ್ರೀತಿಯ ಮಾತನಾಡಿದ್ದಾರೆ.