Publish Date: Mon, 30 May 2022 (10:10 IST)
Updated Date: Mon, 30 May 2022 (10:22 IST)
ಮುಂಬೈ: ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ಹೃದಯಂ ಸಿನಿಮಾದ ಹಕ್ಕು ಪಡೆದಿರುವ ಕರಣ್ ಜೋಹರ್ ಈಗ ಹಿಂದಿಯಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.
ಮಲಯಾಳಂನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಪುತ್ರ ಪ್ರಣವ್ ನಾಯಕರಾಗಿ ಅಭಿನಯಿಸಿದ್ದರು. ಈಗ ಹಿಂದಿಯಲ್ಲಿ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂನನ್ನು ನಾಯಕನಾಗಿ ಲಾಂಚ್ ಮಾಡಲು ಕರಣ್ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಸ್ಟಾರ್ ನಟರ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಕರಣ್ ಜೋಹರ್ ಎತ್ತಿದ ಕೈ. ಈಗ ಇಬ್ರಾಹಿಂನನ್ನು ಕರೆತರಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.