Select Your Language

Notifications

webdunia
webdunia
webdunia
webdunia

ಕರಣ್ ಜೋಹರ್ ಅದ್ಧೂರಿ ಬರ್ತ್ ಡೇ ಪಾರ್ಟಿಗೆ ರಾಕಿ ಭಾಯಿ ಯಶ್?

ಕರಣ್ ಜೋಹರ್ ಅದ್ಧೂರಿ ಬರ್ತ್ ಡೇ ಪಾರ್ಟಿಗೆ ರಾಕಿ ಭಾಯಿ ಯಶ್?
ಮುಂಬೈ , ಮಂಗಳವಾರ, 17 ಮೇ 2022 (09:20 IST)
ಮುಂಬೈ: ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಪ್ರತೀ ವರ್ಷ ಅದ್ಧೂರಿಯಾಗಿ ಬರ್ತ್ ಡೇ ಪಾರ್ಟಿ ಆಯೋಜಿಸುತ್ತಾರೆ. ಇದುವರೆಗೆ ಈ ಪಾರ್ಟಿಗೆ ಕೇವಲ ಬಾಲಿವುಡ್ ಕಲಾವಿದರು ಮಾತ್ರ ಬರುತ್ತಿದ್ದರು.

ಆದರೆ ಈಗ ದಕ್ಷಿಣ ಭಾರತೀಯ ಸಿನಿಮಾಗಳೂ ಬಾಲಿವುಡ್ ಗೆ ಪೈಪೋಟಿ ನೀಡುತ್ತಿವೆ. ಹೀಗಾಗಿ ಬಾಲಿವುಡ್ ನವರು ಈಗ ದಕ್ಷಿಣ ಭಾರತದ ಸಿನಿಮಾಗಳತ್ತ ಚಿತ್ತಹರಿಸುತ್ತಿದ್ದಾರೆ.

ಹೀಗಾಗಿಯೇ ಈ ಬಾರಿ ಕರಣ್ ಬರ್ತ್ ಡೇ ಪಾರ್ಟಿಗೆ ರಾಕಿಂಗ್ ಸ್ಟಾರ್ ಯಶ್ ಗೂ ಆಹ್ವಾನವಿರಲಿದೆ ಎನ್ನಲಾಗಿದೆ. ಕೆಜಿಎಫ್ 2 ಟ್ರೈಲರ್ ರಿಲೀಸ್ ಈವೆಂಟ್ ಗೆ ಕರಣ್ ಜೋಹರ್ ನಿರೂಪಕರಾಗಿ ಬಂದಿದ್ದರು. ಈ ವೇಳೆ ಯಶ್ ರನ್ನು ಹಾಡಿ ಹೊಗಳಿದ್ದರು. ಕೆಜಿಎಫ್ ಸಿನಿಮಾ ಬಗ್ಗೆಯೂ ಕರಣ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ತಮ್ಮ ಬರ್ತ್ ಡೇ ಪಾರ್ಟಿಗೆ ಯಶ್ ಗೆ ಆಹ್ವಾನ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣನಿಗೆ ಸಲ್ಮಾನ್ ಖಾನ್ ಬಲ