Publish Date: Sun, 15 May 2022 (08:50 IST)
Updated Date: Sun, 15 May 2022 (08:51 IST)
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಮತ್ತೆ ಕೊರೋನಾ ಸೋಂಕು ಖಚಿತವಾಗಿದೆ.
ಈ ವಿಚಾರವನ್ನು ಖುದ್ದಾಗಿ ಅಕ್ಷಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಕ್ಯಾನ್ನಸ್ 2022 ರೆಡ್ ಕಾರ್ಪೆಟ್ ಸಮಾರಂಭಕ್ಕೆ ಗೈರಾಗುತ್ತಿರುವುದಾಗಿ ಹೇಳಿದ್ದಾರೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಅಕ್ಷಯ್ ಕೊರೋನಾ ಸೋಂಕಿಗೊಳಗಾಗಿದ್ದರು. ಅದಾದ ಬಳಿಕ ಇದೀಗ ಮತ್ತೆ ಎರಡನೇ ಬಾರಿಗೆ ಸೋಂಕು ತಗುಲಿಸಿಕೊಂಡಿದ್ದಾರೆ. ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ.