Publish Date: Sun, 15 May 2022 (08:10 IST)
Updated Date: Sun, 15 May 2022 (08:33 IST)
ಹೈದರಾಬಾದ್: ಇತ್ತೀಚೆಗೆ ಬಾಲಿವುಡ್ ನನ್ನ ಕೊಂಡುಕೊಳ್ಳಲು ಸಾಧ‍್ಯವಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪ್ರತೀ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ತೆಲುಗಿನಲ್ಲಿ ಹಿಟ್ ಚಿತ್ರಗಳನ್ನು ಕೊಡುವ ಮಹೇಶ್ ಬಾಬು ನಿರ್ಮಾಪಕರ ಜೇಬಿಗೆ ಎಂದೂ ಕತ್ತರಿ ಹಾಕಲ್ಲ. ಅವರ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಗಳು, ಅದ್ಧೂರಿತನಕ್ಕೆ ಏನೂ ಕಡಿಮೆಯಿರಲ್ಲ.
ಇಂತಿಪ್ಪ ಮಹೇಶ್ ಬಾಬು ಪ್ರತೀ ಸಿನಿಮಾಗೆ 35 ರಿಂದ 50 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರಂತೆ. ಇತ್ತೀಚೆಗೆ ಬಿಡುಗಡೆಯಾಗಿರುವ ಸರ್ಕಾರುವಾರಿಪಾಟ ಸಿನಿಮಾಗೂ ಮಹೇಶ್ ಇಷ್ಟೇ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯಿದೆ.