Select Your Language

Notifications

webdunia
webdunia
webdunia
webdunia

ಶಾರುಖ್, ಶ್ರೀದೇವಿ ಪುತ್ರಿಯರ ಜೊತೆ ಅಮಿತಾಭ್ ಮೊಮ್ಮಗನ ಸಿನಿಮಾ

ಶಾರುಖ್, ಶ್ರೀದೇವಿ ಪುತ್ರಿಯರ ಜೊತೆ ಅಮಿತಾಭ್ ಮೊಮ್ಮಗನ ಸಿನಿಮಾ
ಮುಂಬೈ , ಭಾನುವಾರ, 15 ಮೇ 2022 (09:41 IST)
ಮುಂಬೈ: ಬಾಲಿವುಡ್ ಸ್ಟಾರ್ ಗಳಾದ ಶಾರುಖ್ ಖಾನ್, ಶ್ರೀದೇವಿ, ಅಮಿತಾಭ್ ಬಚ್ಚನ್ ಮೊಮ್ಮಗನ ಸಿನಿಮಾವೊಂದು ಘೋಷಣೆಯಾಗಿದೆ.

ಝೋಯಾ ಅಖ್ತರ್ ‘ದಿ ಆರ್ಚೀಸ್’ ಎಂಬ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಪುತ್ರಿ ಸುಹಾನಾ, ಶ್ರೀದೇವಿ ದ್ವಿತೀಯ ಪುತ್ರಿ ಖುಷಿ ಕಪೂರ್, ಅಮಿತಾಭ್ ಮೊಮ್ಮಗ ಅಗಸ್ತ್ಯ ನಂದಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಮುಂದಿನ ವರ್ಷ ತೆರೆಗೆ ಬರಲಿದೆ.

ಆದರೆ ಈ ಸಿನಿಮಾ ಘೋಷಣೆಯಾಗುತ್ತಿದ್ದಂತೇ ನೆಟ್ಟಿಗರು ನೆಪೊಟಿಸಂ (ಸ್ವಜನಪಕ್ಷಪಾತ) ಎಂದು ಜರೆದಿದ್ದಾರೆ. ಸ್ಟಾರ್ ನಟರ ಮಕ್ಕಳಿಗೆ ಸಿನಿಮಾ ರಂಗದಲ್ಲಿ ಬೇಗನೇ ಅವಕಾಶ ಸಿಗುತ್ತದೆ. ಆದರೆ ಪ್ರತಿಭಾವಂತರು ಕಷ್ಟಪಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ಜೊತೆ ಕ್ರಾಂತಿ ಸೆಟ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್