Select Your Language

Notifications

webdunia
webdunia
webdunia
webdunia

ಸಿಂಗಾಪುರದಲ್ಲಿ ಕಾಶ್ಮೀರಿ ಫೈಲ್ಸ್‌ ಚಿತ್ರ ನಿಷೇಧ!

kashmir files singapore bollywood ಕಾಶ್ಮೀರ್‌ ಫೈಲ್ಸ್‌ ಸಿಂಗಾಪುರ ಬಾಲಿವುಡ್
bengaluru , ಮಂಗಳವಾರ, 10 ಮೇ 2022 (14:28 IST)
ಭಾರತದಲ್ಲಿ ಭಾರೀ ವಿವಾದ ಕೆರಳಿಸಿದ ಕಾಶ್ಮೀರಿ ಫೈಲ್ಸ್‌ ಚಿತ್ರವನ್ನು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ. ಈ ಚಿತ್ರ ಎರಡು ಕೋಮುಗಳ ನಡುವೆ ದ್ವೇಷ ಭಾವನೆ ಪ್ರಚೋದಿಸುತ್ತದೆ ಎಂದು ಹೇಳಿದೆ.
೧೯೯೦ರ ದಶಕದಲ್ಲಿ ಹಿಂದೂ ಪಂಡಿತರ ಹತ್ಯೆ ಘಟನೆ ಆಧರಿಸಿದ ಕಥೆ ಹೊಂದಿರುವ ಕಾಶ್ಮೀರಿ ಫೈಲ್ಸ್‌ ಚಿತ್ರವನ್ನು ಸಿಂಗಾಪುರ ಸರಕಾರ ನಿಷೇಧಿಸಿದೆ.
ಕಾಶ್ಮೀರಿ ಫೈಲ್ಸ್‌ ಚಿತ್ರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುವ ಪ್ರಯತ್ನ ಕಾಣುತ್ತದೆ. ಈ ಚಿತ್ರದಲ್ಲಿ ಹಿಂದೂಗಳು ಶೋಷಣೆಗೆ ಒಳಗಾಗಿದ್ದು ಮತ್ತು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ನಡೆದಿದೆ. ಇದು ಯಾವುದೇ ವಿಷಯದಲ್ಲೂ ಸಾಮಾನತೆ ಸಾರುವುದಿಲ್ಲ ಎಂದು ಸಿಂಗಾಪುರ ಸರಕಾರ ಪ್ರಕಟಣೆಯಲ್ಲಿ ವಿವರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಸಮಾವೇಶದಲ್ಲಿ ಸುಮಲತಾ ಬಿಜೆಪಿ ಸೇರ್ಪಡೆ?