ಹೈದರಾಬಾದ್: ಬಾಲಿವುಡ್ ಗೆ ಹೋಗುವ ಬಗ್ಗೆ ಮೊನ್ನೆಯಷ್ಟೇ ನನ್ನನ್ನು ಅವರಿಗೆ ಭರಿಸಲು ಸಾಧ‍್ಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಈಗ ಈ ವಿಚಾರ ವಿವಾದವಾಗುತ್ತಿದ್ದಂತೇ ಸ್ಪಷ್ಟನೆ ಕೊಟ್ಟಿದ್ದಾರೆ.
ಬಾಲಿವುಡ್ ಕುರಿತಾದ ಮಹೇಶ್ ಬಾಬು ಹೇಳಿಕೆಗೆ ಖ್ಯಾತ ನಿರ್ಮಾಪಕ ಮಹೇಶ್ ಭಟ್ ಟಾಂಗ್ ಕೊಟ್ಟಿದ್ದರು. ಇನ್ನೂ ಅನೇಕರು ಮಹೇಶ್ ಬಾಬು ಹೇಳಿಕೆಯನ್ನು ಆಕ್ಷೇಪಿಸಿದ್ದರು.
ಈ ಬಗ್ಗೆ ಇದೀಗ ಸ್ಪಷ್ಟನೆ ಕೊಟ್ಟಿರುವ ಮಹೇಶ್ ಬಾಬು ನನಗೆ ಎಲ್ಲಾ ಭಾಷೆಯ ಬಗ್ಗೆಯೂ ಗೌರವವಿದೆ ಮತ್ತು ಸಿನಿಮಾ ಎಂದರೆ ನನಗೆ ಪ್ರೀತಿ. ತೆಲುಗು ಚಿತ್ರರಂಗದಲ್ಲಿ ನಾನು ಚೆನ್ನಾಗಿದ್ದೇನೆ. ಹೀಗಾಗಿ ಇಲ್ಲೇ ಇರಲು ಬಯಸುತ್ತೇನೆ ಎಂದಿದ್ದೇನೆಯೇ ಹೊರತು ಯಾರನ್ನೂ ಕೀಳಾಗಿ ಕಂಡಿಲ್ಲ. ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.