Publish Date: Thu, 26 May 2022 (09:10 IST)
Updated Date: Thu, 26 May 2022 (09:28 IST)
ಮುಂಬೈ: ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿನ್ನೆ 50 ನೇ ಜನ್ಮದಿನ ಆಚರಿಸಿಕೊಂಡಿದ್ದರು. ನಿನ್ನೆ ರಾತ್ರಿ ಬಾಲಿವುಡ್ ಘಟಾನುಘಟಿಗಳು ಅವರ ಅದ್ಧೂರಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಈ ಬರ್ತ್ ಡೇ ಪಾರ್ಟಿಯಲ್ಲಿ ನಟ ಅಮೀರ್ ಖಾನ್ ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಆಗಮಿಸಿ ಫೋಟೋಗೆ ಪೋಸ್ ಕೊಟ್ಟರೆ ಹೃತಿಕ್ ರೋಷನ್ ಹೊಸ ಗೆಳತಿ ಸಬಾ ಆಝಾದ್ ಜೊತೆಗೆ ಎಂಟ್ರಿ ಕೊಟ್ಟರು.
ಇನ್ನು ಅದ್ಧೂರಿ ಬರ್ತ್ ಡೇ ಪಾರ್ಟಿಗೆ ಶಾರುಖ್ ಖಾನ್ ದಂಪತಿ, ಸಲ್ಮಾನ್ ಖಾನ್, ಫರ್ಹಾನ್ ಖಾನ್, ಸೈಫ್ ಅಲಿ ಖಾನ್, ಕರೀನಾ ಕಪೂರ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಇಡೀ ಬಾಲಿವುಡ್ ಆಗಮಿಸಿತ್ತು. ದಕ್ಷಿಣದ ತಾರೆಯರಿಗೂ ಕರಣ್ ಆಹ್ವಾನವಿತ್ತಿದ್ದಾರೆ ಎನ್ನಲಾಗಿತ್ತು. ಆದರೆ ದಕ್ಷಿಣದ ನಟರು ಕಾಣಿಸಿಕೊಂಡಿರಲಿಲ್ಲ.