Publish Date: Wed, 25 May 2022 (10:20 IST)
Updated Date: Wed, 25 May 2022 (10:32 IST)
ಬೆಂಗಳೂರು: ಪತಿ ರಾಮು ಅಗಲಿದ ಮೇಲೆ ನಟಿ ಮಾಲಾಶ್ರೀ ಸಹಜ ಜೀವನಕ್ಕೆ ಮರಳಲು ಯತ್ನಿಸುತ್ತಿದ್ದಾರೆ.
ಆಗಾಗ ತಮ್ಮ ಸಿನಿ ಫ್ರೆಂಡ್ಸ್ ಜೊತೆ ಮಾಲಾಶ್ರೀ ಸೇರಿ ವೈಯಕ್ತಿಕ ಜೀವನದ ಕಹಿ ಮರೆಯುತ್ತಿದ್ದಾರೆ. ಇದರ ನಡುವೆ ಮೊನ್ನೆಯಷ್ಟೇ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಇದೀಗ ತಮ್ಮ ತಾಯಿ, ಇಬ್ಬರು ಮಕ್ಕಳೊಂದಿಗೆ ದುಬೈಗೆ ತೆರಳಿದ್ದಾರೆ. ದುಬೈನಲ್ಲಿ ತಮ್ಮ ಮಕ್ಕಳೊಂದಿಗೆ ರಜಾ ಮೂಡ್ ನಲ್ಲಿರುವ ಫೋಟೋಗಳನ್ನು ಮಾಲಾಶ್ರೀ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.