Publish Date: Thu, 24 Sep 2020 (21:49 IST)
Updated Date: Thu, 24 Sep 2020 (21:52 IST)
ಬಾಲಿವುಡ್ ನ ಪ್ರಮುಖ ನಟಿಯರಿಗೆ ಇದೀಗ ಬಿಗ್ ಟೆನ್ಶನ್ ಶುರುವಾಗಿದೆ.
ಎನ್ಸಿಬಿ ಅಧಿಕಾರಿಗಳು ನಟಿ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರ ನಿವಾಸಗಳಿಗೆ ತೆರಳಿ ನೋಟಿಸ್ ನೀಡಿದ್ದಾರೆ.
ಬಾಲಿವುಡ್ನಲ್ಲಿ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ಸಿಬಿಯು ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಇತರರನ್ನು ವಿಚಾರಣೆಗಾಗಿ ಕರೆಸಿದೆ.
ಸೆಪ್ಟೆಂಬರ್ 25 ರಂದು ನಟಿ ದೀಪಿಕಾ ಪಡುಕೋಣೆ ವಿಚಾರಣೆಗೆ ಹಾಜರಾಗಲಿದ್ದು, ಶ್ರದ್ಧಾ ಮತ್ತು ಸಾರಾ ಮರುದಿನ ಸೆಪ್ಟೆಂಬರ್ 26 ರಂದು ಹಾಜರಾಗಲಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಡಿಸೈನರ್ ಸಿಮೋನೆ ಖಂಬಟ್ಟಾ ಮತ್ತು ದೀಪಿಕಾ ಅವರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಅವರನ್ನು ಸಹ ಸಂಸ್ಥೆ ತನಿಖೆಗಾಗಿ ಕರೆಸಿಕೊಂಡಿದೆ ಎನ್ನಲಾಗಿದೆ.