Select Your Language

Notifications

webdunia
webdunia
webdunia
webdunia

ಡ್ರಗ್ ಕೇಸ್ - ಹೊಸ ಬಾಂಬ್ ಸಿಡಿಸಿದ ಸಂಸದೆ ನವನೀತ್ ಕೌರ್ ರಾಣಾ

ಡ್ರಗ್ ಕೇಸ್ - ಹೊಸ ಬಾಂಬ್ ಸಿಡಿಸಿದ ಸಂಸದೆ ನವನೀತ್ ಕೌರ್ ರಾಣಾ
ಮುಂಬೈ , ಮಂಗಳವಾರ, 22 ಸೆಪ್ಟಂಬರ್ 2020 (22:19 IST)
ಬಾಲಿವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ತನಿಖೆ ನಡೆಸುತ್ತಿರುವಾಗಲೇ ಸಂಸದೆಯೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.


ಎನ್‌ಸಿಬಿಯಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು "ಇತರ ವೀರರ" ತನಿಖೆ ನಡೆಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

"ನಾವು ಯಾವ ಆರೋಪಗಳ ಬಗ್ಗೆ ಮಾತನಾಡುತ್ತಿದ್ದೇವೆ? 3 ವರ್ಷಗಳ ಹಿಂದೆ 2017 ರಲ್ಲಿ ನಡೆದ ಕೆಲವು ಚಾಟ್‌ಗಳಿಂದ ಈಗ ತನಿಖೆ ನಡೆಸಲಾಗುತ್ತಿದೆ.

2019 ರ ಕರಣ್ ಜೋಹರ್ ಅವರ ವೈರಲ್ ವಿಡಿಯೋವನ್ನು ಉಲ್ಲೇಖಿಸಿರುವ ಸಂಸದೆ ರಾಣಾ, ಒಂದು ವರ್ಷದ ಹಿಂದಿನ ಈ ವಿಡಿಯೋ ಬಗ್ಗೆ ಯಾರೂ ತನಿಖೆ ನಡೆಸುತ್ತಿಲ್ಲ ಏಕೆ ಎಂದು ಕೇಳಿದ್ದಾರೆ.

ಶಾಹಿದ್ ಕಪೂರ್, ಅರ್ಜುನ್ ಕಪೂರ್, ಮಲೈಕಾ ಅರೋರಾ ಮೊದಲಾದವರು ಅಲ್ಲಿದ್ದರು. ಆದರೆ ಎನ್ ಸಿ ಬಿ ವಿಡಿಯೋ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಲ್ಲದೇ ಬಾಲಿವುಡ್ ಗೆ ಮಾತ್ರ ಸೀಮಿತವಾಗದೆ ಬೇರೆ ರಂಗಗಳಲ್ಲಿ ಡ್ರಗ್ಸ್ ಬಳಕೆಯಾಗುತ್ತಿದ್ದು, ಅದನ್ನು ಪತ್ತೆ ಹಚ್ಚಬೇಕು ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಹೊಸ #Metoo : ನಿರ್ದೇಶಕ ತುಂಬಾ ಒಳ್ಳೆಯವರು ಎಂದ ನಟಿ