ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಎಂದು ಮಂಡ್ಯ ಸಂಸದೆ ಸುಮಲತಾ ಮನವಿ ಮಾಡಿದ್ದಾರೆ.
									
										
								
																	
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡ್ರಗ್ಸ್ ಇಲ್ಲವೇ ಇಲ್ಲ ಅಂತ ಹೇಳಿಲ್ಲ. ನಮ್ಮ ಅನುಭವದಲ್ಲಿ ಇಲ್ಲ ಎಂದಷ್ಟೇ ಹೇಳಿದ್ದು. ಆದರೆ ಆರೋಪ ಸಾಬೀತಾಗುವ ಮೊದಲೇ ಜಡ್ಜ್ ಮೆಂಟ್  ಕೊಡಬಾರದು. ಚಲನಚಿತ್ರರಂಗ ಅಷ್ಟೇ ಅಲ್ಲ ಎಲ್ಲ ಕಡೆಯಲ್ಲೂ ಇದೆ. ಇಡೀ ಕನ್ನಡ ಚಿತ್ರರಂಗವನ್ನೇ ಬೊಟ್ಟು ಮಾಡಬಾರದು ಎಂದು ಹೇಳಿದ್ದಾರೆ.